ಇಂದು ಸಂಜೆ 4ಕ್ಕೆ KERCಯಿಂದ ಸುದ್ದಿಗೋಷ್ಠಿ: ವಿದ್ಯುತ್ ದರ ಪರಿಷ್ಕರಣೆ ಫಿಕ್ಸ್

ಬೆಂಗಳೂರು: ಕೊರೋನಾ ಆರ್ಥಿಕ ಸಂಕಷ್ಟ, ಕೋವಿಡ್ ಜನರಿಗೆ ತಂದಿಟ್ಟಂತ ಆರ್ಥಿಕ ಹೊರೆಯ ನಡುವೆ ವಿದ್ಯುತ್ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ವಿದ್ಯುತ್ ನಿಗಮಗಳು ಸಲ್ಲಿಸಿದ್ದಂತ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಈಗ ಕೊರೋನಾ ಕಡಿಮೆಯಾಗಿ, ಸಹಜ ಸ್ಥಿತಿಯಲ್ಲಿ ಜನಜೀವನ ಬಂದಿರೋ ಹೊತ್ತಿನಲ್ಲಿ, ವಿದ್ಯುತ್ ದರ ಏರಿಕೆ ಬಗ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದು ಸಂಜೆ 4ಕ್ಕೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದಿಂದ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಈ ವೇಳೆ ವಿದ್ಯುತ್ ದರ ಏರಿಕೆ  ಬಗ್ಗೆಯೂ ಮಾಹಿತಿ ಪ್ರಕಟಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರಕ್ಕೆ ವಿದ್ಯುತ್ ದರ ನಿಗಮಗಳು ವಿದ್ಯುತ್ ದರ ಏರಿಕೆ ಬಗ್ಗೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ, ಸರ್ಕಾರ ಮಾತ್ರ ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದ ಸಲುವಾಗಿ ಅನುಮತಿ ನೀಡಿರಲ್ಲ. ಇದೀಗ ಮತ್ತೆ ಸಲ್ಲಿಕೆಯಾದಂತ ಪ್ರಸ್ತಾವನೆಗೆ ಸರ್ಕಾರ ಅನುಮತಿಸಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಗೆ ಸಂಜೆ 4ಕ್ಕೆ ಕೆ ಇ ಆರ್ ಸಿಯಿಂದ ಸುದ್ದಿಗೋಷ್ಠಿ ನಿಗದಿ ಪಡಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲಿ ವಿದ್ಯುತ್ ದರ ಪರಿಷ್ಕರಣೆಯ ಮಾಹಿತಿಯನ್ನು ಪ್ರಕಟಿಸೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.

About The Author