ದೇಶದ ಹಲವೆಡೆ ಆಹಾರ ವಿತರಣಾ ಆ್ಯಪ್ ಜೊಮ್ಯಾಟೋ, ಸ್ವಿಗ್ಗಿ ಡೌನ್

ನವದೆಹಲಿ: ಆಹಾರ ವಿತರಣಾ ಅಪ್ಲಿಕೇಶನ್ ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಬುಧವಾರ ರಾಷ್ಟ್ರವ್ಯಾಪಿ ಸ್ಥಗಿತಗೊಂಡಿರೋದಾಗಿ ತಿಳಿದು ಬಂದಿದೆ. ಇದು ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳು ಅವಲಂಬಿಸಿರುವ ಅಮೆಜಾನ್ ವೆಬ್ ಸರ್ವೀಸಸ್ ತೊಂದರೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ.

ಎರಡೂ ಅಪ್ಲಿಕೇಶನ್ ಗಳು ಅರ್ಧ ಗಂಟೆಯೊಳಗೆ ಸರಿಯಾದವು, ನಂತರ ಮತ್ತೆ ಸರ್ವರ್ ಡೌನ್ ಆದ ಕಾರಣ, ಬಳಕೆದಾರರು ಆರ್ಡರ್ಗಳನ್ನು ನೀಡಲು ಅಥವಾ ಮೆನುಗಳು ಮತ್ತು ಪಟ್ಟಿಗಳನ್ನು ಬ್ರೌಸ್ ಮಾಡಲು ಸಾಧ್ಯವಾಗದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಜೊಮ್ಯಾಟೋ, ಸ್ವೀಗ್ಗಿ ತಾತ್ಕಾಲಿಕ ದೋಷವನ್ನು ಸರಿಪಡಿಸೋ ನಿಟ್ಟಿನಲ್ಲಿ ನಮ್ಮ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದಿದೆ.

About The Author