ಬೆಂಗಳೂರು: ನಂಬರ್ ಪ್ಲೇಟ್ ಮೇಲೆ ಯಾವುದೇ ಮಾಹಿತಿ ಹಾಕುವಂತಿಲ್ಲ ಎಂಬುದಾಗಿ ಕೋರ್ಟ್ ಆದೇಶವಿದೆ. ಹೀಗಿದ್ದೂ ನಂಬರ್ ಪ್ಲೇಟ್ ಮೇಲೆ ದೊಡ್ಡದಾಗಿ ಶಾಸಕರ ಎಂಬುದಾಗಿ ನಾಮಫಲಕದ ಮೇಲೆ ಅಳವಡಿಸಿದ್ದಂತ ವಿಧಾನಸೌಧದಲ್ಲೇ ಶಾಸಕರ ಪಾಸ್ ಹೊಂದಿದ್ದ ಕಾರಿಗೆ ಆರ್ ಟಿ ಓ ಅಧಿಕಾರಿಗಳು ನೋಟೀಸ್ ನೀಡಿ ಶಾಕ್ ನೀಡಿದ್ದಾರೆ.
ಹೌದು.. ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ದೊಡ್ಡದಾಗಿ ಬರಹ ಹೊಂದಿತ್ತು. ಈ ಕಾರನ್ನು RTO ಅಧಿಕಾರಿಗಳಿಂದ ವಿಧಾನಸೌಧದ ಆವರಣದೊಳಗೆ ಚೇಸ್ ಮಾಡಿಕೊಂಡು ಬಂದು ನೊಟೀಸ್ ನೀಡಲಾಗಿದೆ.
ಆರ್ ಟಿ ಓ ಅಧಿಕಾರಿಗಳು ನೀಡಿರುವಂತ ನೋಟಿಸ್ ನಲ್ಲಿ ನಂಬರ್ ಪ್ಲೇಟ್ ಡಿಫೆಕ್ಟ್ ಎಂದು ಹೇಳಿದ್ದಾರೆ. ಆ ಇನ್ನೋವಾ ಕಾರನ್ನು ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣ ರೆಡ್ಡಿ ಹೆಸರಿನಲ್ಲಿ ಓಡಾಡುತ್ತಿತ್ತು ಎಂದು ತಿಳಿದು ಬಂದಿದೆ. ಇಂದು ಆರ್ ಟಿ ಓ ಅಧಿಕಾರಿಗಳು ನೋಟಿಸ್ ನೀಡಿದ ಸಂದರ್ಭದಲ್ಲಿ, ಶಾಸಕರ ಹೆಸರಿನಲ್ಲಿ ಇನ್ನೋವಾ ಕಾರಿನಲ್ಲಿ ಒಬ್ಬನೇ ಓಡಾಡುತ್ತಿದ್ದ ಚಾಲಕ ಇದ್ದುದಾಗಿ ತಿಳಿದು ಬಂದಿದೆ.




