ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಕಾರಣಗಳಿಂದ ಮೃತಪಟ್ಟವರ ಕುಟುಂಬಗಳಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್’ನ ಮಹಾ ಪೋಷಕ ಇಂಡುವಾಳು ಸಚ್ಚಿದಾನಂದ ಗುರುವಾರ ಆರ್ಥಿಕ ನೆರವು ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ. ಶ್ರೀಧರ್ ಇತರರ ಜತೆ ನಗುವನಹಳ್ಳಿ, ನಗುವನಹಳ್ಳಿ ಕಾಲೊನಿ, ಚಿಕ್ಕ ಅಂಕನಹಳ್ಳಿ, ಮೇಳಾಪುರ, ಬೆಳವಾಡಿ, ಚಂದಗಾಲು ಗ್ರಾಮಗಳಿಗೆ ತೆರಳಿ ಮೃತರ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದರು.
ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ದುಸ್ಥಿತಿಯಲ್ಲಿದ್ದು, ಇದರ ಅಭಿವೃದ್ಧಿಗೆ ವೈಯಕ್ತಿಕ ನೆರವು ನೀಡುತ್ತೇನೆ. ಅಗತ್ಯಬಿದ್ದರೆ ಸಂಸದರ ನಿಧಿಯಿಂದಲೂ ಅನುದಾನ ಕೊಡಿಸುವುದಾಗಿ ಸಚ್ಚಿದಾನಂದ ಭರವಸೆ ನೀಡಿದರು.
ಮೇಳಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಜೆ. ಪುಟ್ಟರಾಜು, ಗ್ರಾ.ಪಂ. ಸದಸ್ಯರಾದ ಕೃಷ್ಣ, ಆನಂದ್, ಶಿವಕುಮಾರ್ ಇತತರು ಸಚ್ಚಿದಾನಂದ ಅವರ ಜತೆಗಿದ್ದರು.




