Monday, October 27, 2025

Latest Posts

ಡೆಲ್ಲಿಗೆ ಸತತ ಎರಡು ಸೋಲು: ಚಾಣಾಕ್ಷತನ ತೋರದ ನಾಯಕ ಪಂತ್

- Advertisement -

ಮುಂಬೈ:ಈ ಬಾರಿಯ ಐಪಿಎಲ್ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದಾಗ ಡೆಲ್ಲಿ ತಂಡ ಬಲಿಷ್ಠವಾಗಿದೆ ಎಂದೆ ಎಲ್ಲರೂ ಭಾವಿಸಿದ್ದರು. ಅದರೆ ಇದೀಗ ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿದೆ.


ಅಂಕಪಟ್ಟಿಯಲ್ಲಿ ಎಂಟನೆ ಸ್ಥಾನಕ್ಕೆ ಕುಸಿದು ನೇಟ್ ರನ್ ರೇಟ್ 0.116 ಆಗಿದೆ. ಗುಜರಾತ್ ವಿರುದ್ಧ ಸೋತಿದ್ದ ಡೆಲ್ಲಿ ತಂಡಕ್ಕೆ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಹಾಗೂ ಆಲ್ರೌಂಡರ್ ಅನಿರಿಚ್ ನೊಟ್ರ್ಜೆ ತಂಡಕ್ಕೆ ಆನೆ ಬಲ ತುಂಬಿದ್ದರು. ಆದರೂ ಲಕ್ನೊ ತಂಡದೆದುರು ಸೋಲು ಕಂಡಿತು.

ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಡೆಲ್ಲಿ ವೈಫಲ್ಯ ಅನುಭವಿಸಿತು.ಜೊತೆಗೆ ರಿಷಭ್ ಪಂತ್ ನಾಯಕತ್ವವನ್ನು ಜಾಣ್ಮೆಯಿಂದ ನಿಭಾಯಿಸುವಲ್ಲಿ ಎಡವಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟಾಗ ಓಪನರ್‍ಗಳಾದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ 67 ರನ್‍ಗಳ ಒಳ್ಳೆಯ ಓಪನಿಂಗ್ ಕೊಟ್ಟಿದ್ರು.ನಂತರ ಮೂರನೆ ಕ್ರಮಾಂಕದಲ್ಲಿ ರೊವಮನ್ ಪೊವೆಲ್ ಅವರನ್ನು ಕಳಿಸಿ ಡೆಲ್ಲಿ ಯಡವಟ್ಟು ಮಾಡಿಕೊಂಡಿತು. ಡೇವಿಡ್ ವಾರ್ನರ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡದೆ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

74 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರಿಷಭ್ ಪಂತ್ ಹಾಗೂ ಸರ್ಫಾರಾಜ್ ಖಾನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಬೇಕಾಯಿತು.

ಡೆತ್ ಓವರ್‍ಗಳಲ್ಲಿ ರಿಷಭ್ ಪಂತ್ ಹಾಗೂ ಸರ್ಫಾರಾಜ್ ಖಾನ್ ಎಚ್ಚರಿಕೆಯ ಬ್ಯಾಟಿಂಗ್ ಮಾಡದಿರಾದರೂ ಬಿಗ್ ಟಾರ್ಗೆಟ್ ನಿಡುವಲ್ಲಿ ವಿಫಲವಾಯಿತು. ಡೆತ್ ಓವರ್‍ಗಳಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ ಮಾಡಬೇಕಿತ್ತು. ಲಲಿತ್ ಯಾದವ್, ಅಕ್ಷರ್ ಪಟೇಲ್ ಇದ್ದಿದ್ದರಿಂದ ಡೆಲ್ಲಿ ತಂಡಕ್ಕೆ ಕುಸಿಯುವ ಭೀತಿ ಇರುತ್ತಿರಲಿಲ್ಲ.

ಇನ್ನು ಲಕ್ನೊ ತಂಡ ಚೇಸ್ ಮಾಡಿದಾಗಲೂ ರಿಷಭ್ ಪಂತ್ ಮತ್ತೆ ಯಡವಟ್ಟು ಮಾಡಿದರು. ಸ್ಪಿನ್ನರ್ಸ್‍ಗಳಿಗೆ ನೆರವು ನೀಡುವ ಪಿಚ್‍ನಲ್ಲಿ ತಂಡದ ಸ್ಪಿನ್ನರ್ಸ್‍ಗಳನ್ನು ಸರಿಯಾಗಿ ಬಳಸಿಕೊಳ್ಳದೇ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿದರು.

ಸ್ಪಿನ್ನರ್ ಅಕ್ಷರ್ ಪಟೇಲ್‍ಗೆ ಕೇವಲ 2 ಓವರ್ ಕೊಟ್ಟರೆ, ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್‍ಗೆ 3.4 ಓವರ್ ಕೊಟ್ಟಿದ್ದಾರೆ. ಸ್ಪಿನ್ನರ್ಸ್‍ಗಳಿಗೆ ಓವರ್ ಕೊಟ್ಟಿದ್ದರೆ ಹೆಚ್ಚು ಹೆಚ್ಚು ಒತ್ತಡ ಹಾಕಿ ಪಂದ್ಯವನ್ನು ಗೆಲ್ಲಬಹುದಿತ್ತು ಅನ್ನೋದು ಕ್ರಿಕೆಟ್ ಪಂಡಿತರ ವಾದವಾಗಿದೆ.

- Advertisement -

Latest Posts

Don't Miss