ಭಾರತದಲ್ಲಿ ಮತ್ತೊಂದೂ ಕೋವಿಡ್-19 ರೂಪಾಂತರಿ ಎಕ್ಸ್ಇ ಕೇಸ್ ಪತ್ತೆ, ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆ

ಮುಂಬೈ: ನಗರದಲ್ಲಿ ಇಂದು ಕೋವಿಡ್-19 ರೂಪಾಂತರಿ ಎಕ್ಸ್ಇ ಮೊದಲ ಕೇಸ್ ಪತ್ತೆಯಾಗಿದೆ ಎಂದು ಬಿಎಂಸಿ ದೃಢಪಡಿಸಿದೆ. ಹೀಗಾಗಿ ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಎಕ್ಸ್ಇ ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ವರದಿಯಾದ ಕೋವಿಡ್ -19 ಪ್ರಕರಣವನ್ನು ಹೊಸ ಎಕ್ಸ್ಇ ರೂಪಾಂತರ ಎಂದು ದೃಢಪಡಿಸಲಾಗಿದೆ ಎಂದು ಬಿಎಂಸಿ ಶನಿವಾರ ತಿಳಿಸಿದೆ.

ಮಾರ್ಚ್ 11 ರಂದು ವಡೋದರಾಗೆ ಪ್ರಯಾಣಿಸಿದ 67 ವರ್ಷದ ವ್ಯಕ್ತಿಗೆ ಹೋಟೆಲ್ನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರು ರೋಗಲಕ್ಷಣವಿಲ್ಲದ ಕಾರಣ, ಅವರು ಮುಂಬೈಗೆ ಹಿಂತಿರುಗಿದರು. ಅವರ ಫಲಿತಾಂಶಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಯಿತು, ನಂತರ ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಯು ಕೋವಿಡ್ -19 ರ ಎಕ್ಸ್ಇ ರೂಪಾಂತರವನ್ನು ಹೊಂದಿರುವುದು ಕಂಡುಬಂದಿದೆ.

ಬಿಎಂಸಿ ಅಧಿಕಾರಿಗಳು ಈ ವ್ಯಕ್ತಿ ಈಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ಹೇಳಿದರು.

ಅಂದಹಾಗೇ ಗುಜರಾತ್ ನ ವಡೋದರಾದಲ್ಲಿ ದೇಶದಲ್ಲಿಯೇ ಮೊದಲ ಕೋವಿಡ್ ಎಕ್ಸ್ ಇ ರೂಪಾಂತರಿ ಪತ್ತೆಯಾಗಿತ್ತು. ಈ ಬಳಿಕ, ಈಗ ಮತ್ತೊಂದು ಕೇಸ್ ಮುಂಬೈನಲ್ಲಿ ಪತ್ತೆಯಾಗಿದ್ದು, ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

About The Author