ಬೆಂಗಳೂರು ನಿಜವಾದ ಅಂತರರಾಷ್ಟ್ರೀಯ ನಗರ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಬೆಂಗಳೂರು ನಿಜವಾದ ಅಂತರರಾಷ್ಟ್ರೀಯ ನಗರವಾಗಿದೆ. ಸರ್ಕಾರ ನಗರಾಭಿವೃದ್ಧಿಗಾಗಿ ಅಮೃತ ನಗರೋತ್ಥಾನದಡಿ ನೀಡಿರುವ ಅನುದಾನದಲ್ಲಿ ಎಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಬೆಂಗಳೂರು ಸುಂದರ ನಗರ, ಐಟಿ.ಬಿಟಿ ರಾಜಧಾನಿ ಮಾತ್ರವಲ್ಲ, ನಿಜವಾಗಿಯೂ ಆರ್ಥಿಕ ರಾಜಧಾನಿಯಾಗಿಯೂ ಹೊರಹೊಮ್ಮುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾನುವಾರದಂದು ಪದ್ಮನಾಭನಗರ ಜಾನಪದ ಉತ್ಸವ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿದ ಅವರು, ಕಳೆದ 3 ತ್ರೈಮಾಸಿಕದಲ್ಲಿ ಅತಿ ಹೆಚ್ಚು ಅಂದರೆ ಶೇ. 47 ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಪಕ್ಕದ ರಾಜ್ಯಗಳಿಗೆ 1-2 ಅಥವಾ 4 ರಷ್ಟು ಬಂದಿದೆ. ವಿಶ್ವದ ಎಲ್ಲಾ ದೇಶಗಳು ಕರ್ನಾಟಕದೆಡೆಗೆ ಬರುತ್ತಿವೆ. ಬೆಂಗಳೂರು ನಗರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

About The Author