ಮಂಡ್ಯ: ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಂತ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರಲಿದ್ದಾರೆ ಹಾಗೂ ಅವರ ಪುತ್ರ ಅಭಿಷೇಕ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆ ಬಗ್ಗೆ ಸಂಸದೆ ಸುಮಲತಾ ಏನ್ ಹೇಳಿದ್ರು ಅಂತ ಮುಂದೆ ಓದಿ..
ಇಂದು ಬಿಜೆಪಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ನಾನು ಎಲೆಕ್ಷನ್ ಗೆ ನಿಂತಾಗಿನಿಂದಲೂ ಈ ಮಾತು ಕೇಳಿ ಬರ್ತಾ ಇದೆ. ನನ್ನ ಉದ್ದೇಶ ಪಕ್ಷ ಸೇರುವುದಲ್ಲ. ನನ್ನದು ಜಿಲ್ಲೆಯ ಅಭಿವೃದ್ಧಿಯೇ ನನ್ನ ಉದ್ದೇಶವಾಗಿದೆ ಎಂದರು.
ನಾನು ಜಿಲ್ಲೆಯ ಜನರ ಮಾತಿಗೆ ಬದ್ಧನಾಗಿದ್ದೇನೆ. ಅವರು ಹೇಗೆ ಹೇಳ್ತಾರೋ ಹಾಗೆ ಮಾಡುವೆ. ನಾನು ಪಕ್ಷ ಸೇರುವ ಬಗ್ಗೆ ಜಿಲ್ಲೆಯ ಜನತೆ ಹೇಳಬೇಕೇ ಹೊರತು, ನಾನಾಗಿ ನಿರ್ಧಾರ ತೆಗೆದುಕೊಳ್ಳೋದಕ್ಕೆ ಆಗುವುದಿಲ್ಲ ಎಂದರು.
ಇನ್ನೂ ತಮ್ಮ ಪುತ್ರ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್ ಗೆ ಬಿಟ್ಟ ವಿಚಾರವಾಗಿದೆ. ಅವನು ಚುನಾವಣೆಗೆ ನಿಲ್ಲಿಸಿ ಅಂತಿದ್ದಾರೆ ಜನರು ಎಂದರು.



