ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋ ಮುನ್ನಾ, ಇಂದು ಸಚಿವ ಈಶ್ವರಪ್ಪ ದೇವಸ್ಥಾನಗಳಿಗೆ ತೆರಳಿ, ದೇವರಿಗೆ ಪೂಜೆ ಸಲ್ಲಿಸಿದರು. ತಮ್ಮ ಮನೆದೇವರು ಅಲ್ಲದೇ, ನಗರದ ಗಣಪತಿ ದೇವಸ್ಥಾನಕ್ಕೂ ತೆರಳಿ ಪೂಜೆ ನೆರವೇರಿಸಿದರು. ಈ ವೇಳೆ ಅವರಿಗೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿ, ಮತ್ತೆ ಸಚಿವರಾಗೋ ಮುನ್ಸೂಚನೆ, ಶುಭ ಸೂಚನೆಯೊಂದು ಸಿಕ್ಕೆದೆ ಎಂದು ತಿಳಿದು ಬಂದಿದೆ.
ಹೌದು.. ನಗರದ ಶುಭಶ್ರೀ ಸಮುದಾಯದ ಮುಂಭಾಗವಿರುವಂತ ಗಣಪತಿ ಗುಡಿಯಲ್ಲಿ ಅರ್ಚಕರು ಮಂಗಳಾರತಿ ನಂತ್ರ, ಈಶ್ವರಪ್ಪನಿಗೆ ಪ್ರಸಾದ ವಿತರಣೆ ವೇಳೆಯಲ್ಲಿ, ಗಣಪತಿಗೆ ಮಾಡಿದ್ದಂತ ಹೂವಿನ ಹಾರವು ಬಲಬಾಗದಿಂದ ಬಿದ್ದು, ಶುಭಸೂಚನೆಯನ್ನು ನೀಡಿದೆ. ಈ ಸಂದರ್ಭದಲ್ಲಿ ನಕ್ಕು ಈಶ್ವರಪ್ಪ ಸುಮ್ಮನಾಗಿದ್ರು. ಆದ್ರೇ.. ಅಲ್ಲಿದ್ದವರು ಇದನ್ನು ಶುಭ ಸೂಚನೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ರಾಜೀನಾಮೆ ಸಲ್ಲಿಸೋದಕ್ಕೆ ತೆರಳೋ ಮುನ್ನಾ ಗಣಪತಿಗೆ ಪೂಜೆ ಸಲ್ಲಿಸೋ ವೇಳೆಯಲ್ಲಿ ಸಚಿವ ಈಶ್ವರಪ್ಪಗೆ ಶುಭಸೂಚನೆ ಸಿಕ್ಕಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿ ಬರೋ ಮುನ್ಸೂಚನೆಯನ್ನು ಗಣಪತಿ ಹೂವಿನಹಾರದ ಪ್ರಸಾದ ಮೂಲಕ ನೀಡಿದ್ದಾನೆ. ಹಾಗಾದ್ರೇ ತನಿಖೆಯಲ್ಲಿ ಕೆ.ಎಸ್ ಈಶ್ವರಪ್ಪ ಆರೋಪ ಮುಕ್ತರಾಗುತ್ತಾರಾ.? ಮತ್ತೆ ಸಚಿವರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.




