ಬೆಂಗಳೂರು: ಭಾರತದ ಮುಂಚೂಣಿಯ ಅಮ್ಯೂಸ್ ಮೆಂಟ್ ಪಾರ್ಕ್ ಸರಣಿ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ಮೇ 31ರವರೆಗೆ ಬೆಂಗಳೂರು ಪಾರ್ಕ್ ನಲ್ಲಿ `ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ.
ಬೇಸಿಗೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಂಡರ್ಲಾ ವಿಸ್ತಾರ ಶ್ರೇಣಿಯ ಚಟುವಟಿಕೆಗಳನ್ನು ಆಯೋಜಿಸಿದ್ದು ಅದರಲ್ಲಿ ಲೈವ್ ಕಾರ್ಯಕ್ರಮಗಳು, ಸ್ಟ್ರೀಟ್ ಫುಡ್ ಫೆಸ್ಟಿವಲ್ಸ್, ಫನ್ಗೇಮ್ಸ್ ಮತ್ತುಡಿಜೆ ಮುಂತಾದ ಹಲವು ಕಾರ್ಯಕ್ರಮಗಳಿದ್ದು ವಂಡರ್ಲಾದ ಲ್ಯಾಂಡ್ ಮತ್ತು ವಾಟರ್ ರೈಡ್ಗಳ ಥ್ರಿಲ್ನೊಂದಿಗೆ ಆನಂದಿಸಬಹುದು. ಗ್ರಾಹಕರು ಲಕ್ಕಿ ಡ್ರಾನಲ್ಲಿ ಭಾಗವಹಿಸಿ ಬಂಪರ್ ಬಹುಮಾನ `ಟಿವಿಎಸ್ ದ್ವಿಚಕ್ರ ವಾಹನ’ ಕೂಡಾ ಗೆಲ್ಲಬಹುದು.
ಇದರೊಂದಿಗೆ ವಂಡರ್ಲಾಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ರೂಪಿಸಿದೆ. ತಮ್ಮಟಿಕೆಟ್ಕೌಂಟರ್ನಲ್ಲಿತಮ್ಮಕಾಲೇಜುಐಡಿ ತೋರಿಸಿ 22ಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ತಮ್ಮ ಪ್ರವೇಶದ ಟಿಕೆಟ್ಗಳಿಗೆ ಶೇ.20ರಷ್ಟು ರಿಯಾಯಿತಿ ಪಡೆಯಬಹುದು. 10, 11 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಹಾಲ್ಟಿಕೆಟ್ ತೋರಿಸಿ ಶೇ.35ರಷ್ಟು ಕಡಿತ ಪಡೆಯಬಹುದು.
ಬಿಎಂಟಿಸಿ ಏರ್ಕಂಡೀಷನ್ಡ್ ವೋಲ್ವೋ ಬಸ್ನಲ್ಲಿ ವಂಡರ್ ಲಾ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ಗ್ರಾಹಕರು ಪಾರ್ಕ್ ಟಿಕೆಟ್ಗಳ ಮೇಲೆ ಶೇ.15ರಷ್ಟು ಕಡಿತ ಪಡೆಯುತ್ತಾರೆ. ಈ ರಿಯಾಯಿತಿಯನ್ನು ವಂಡರ್ ಲಾ ಟಿಕೆಟ್ ಕೌಂಟರ್ನಲ್ಲಿ ಬಸ್ ಟಿಕೆಟ್ಗಳನ್ನು ನೀಡಿ ಪಡೆಯಬಹುದು. ಈ ರಿಯಾಯಿತಿ ಬಿಎಂಟಿಸಿ/ವೋಲ್ವೋ ಬಸ್ ಪಾಸ್ಗಳಿಗೆ ಅನ್ವಯಿಸುವುದಿಲ್ಲ.
ಇದಲ್ಲದೆ 5 ದಿನಗಳ ಮುನ್ನ ನಿಮ್ಮ ಭೇಟಿಯನ್ನು ಯೋಜಿಸಿದರೆ ಶೇ.10ರಷ್ಟು ಅರ್ಲಿ ಬರ್ಡ್ಆಫರ್ಕೂಡಾ ಲಭ್ಯವಿದೆ. ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಿ ವಂಡರ್ಲಾ ಸಂದರ್ಶಕರಿಗೆ ಆನ್ಲೈನ್ ಪೋರ್ಟಲ್ https://bookings.wonderla.com/ ನಲ್ಲಿ ಅವರ ಪ್ರವೇಶ ಟಿಕೆಟ್ಗಳನ್ನು ಮುಂಗಡ ಬುಕಿಂಗ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ವಂಡರ್ಲಾ ವೆಬ್ಸೈಟ್ https://www.wonderla.com/ ಪರೀಕ್ಷಿಸಿ ಅಥವಾ ಸಂಪರ್ಕಿಸಿ: 080 37230333, 080 35073966.




