ಅವರ ಬೀರುನಲ್ಲಿ ಕರೆಪ್ಶನ್ ಎಷ್ಟೊಂದು ಅಸ್ಥಿ ಪಂಜರ್ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ – ಸಿಎಂ ಬೊಮ್ಮಾಯಿ ವಾಗ್ದಾಳಿ

ಹೊಸಪೇಟೆ: ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಿಂದ ಪ್ರವಾಸ ಮಾಡಲಿ, ಆ ಬಗ್ಗೆ ನಮ್ಮದು ಯಾವುದೇ ಪ್ರಶ್ನೆ ಇಲ್ಲ. ಬಹಳ ಶುದ್ಧ ಹಸ್ತರಾದ ಇವರು, ಪವಿತ್ರ ಹಸ್ತದವರೋ ಅಥವಾ ಏನ್ ಅಂತ ಜನರಿಗೆ ಗೊತ್ತಿದೆ. ಕಮೀಷನ್ ಬಗ್ಗೆ ಮಾತನಾಡೋ ಶುದ್ಧ ಹಸ್ತರು ಈಗ ಯಾತ್ರೆ ಹೊರಟಿದ್ದಾರೆ. ಇವರ ಬಗ್ಗೆ ಈಗಾಗಲೇ ಜನರಿಗೆ ಗೊತ್ತಿದೆ. ಅವರ ಬೀರುನಲ್ಲಿ ಕರೆಪ್ಶನ್ ಎಷ್ಟೊಂದು ಅಸ್ಥಿ ಪಂಜರ್ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ. ಯಾವುದು ಕೂಡ ಜನರಿಗೆ ಪ್ರಯೋಜನ ಆಗೋದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜೆ ಜಾರ್ಜ್ ಆರೋಪದ ಸಂದರ್ಭದಲ್ಲಿ, ಆರಂಭದಲ್ಲಿಯೇ ಅವರ ವಿರುದ್ಧ ವೀಡಿಯೋ ಇತ್ತು, ಡೆತ್ ನೋಟ್ ಇತ್ತು. ಹೀಗಿದ್ದೂ ಅವರ ವಿರುದ್ಧ ಎಫ್ಐಆರ್ ಆಗಿತ್ತಾ.? ಹೀಗಿದ್ದೂ ಮುಚ್ಚಾಕುವ ಪ್ರಯತ್ನ ಆಗಲಿಲ್ವಾ.? ಕೋರ್ಟ್ ನಿಂದ ಆದೇಶ ಬಂದ ಮೇಲೆ ಜಾರ್ಜ್ ವಿರುದ್ಧ ಎಫ್ಐಆರ್ ಆಯ್ತು ಎಂಬುದಾಗಿ ಕಿಡಿಕಾರಿದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತೆ ಅದರ ಆಧಾರದ ಮೇಲೆ  ಮುಂದಿನ ಸೆಕ್ಷನ್ ಹಾಕ್ತೀನಿ. ಕಾಂಗ್ರೆಸ್ ನವರು ಯಾತ್ರೆ, ಏನ್ ಬೇಕಾದ್ರೂ ಮಾಡಿಕೊಳ್ಳಲಿ ಎಂಬುದಾಗಿ ಸ್ಪಷ್ಟ ಪಡಿಸಿದರು.

About The Author