ನವದೆಹಲಿ: ವಿಶ್ವದಾಧ್ಯಂತ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಾಗಲೇ, ಭಾರತದಲ್ಲಿಯೂ ಕೋವಿಡ್ ಕೇಸ್ ಗಳ ಸಂಖ್ಯೆ ಇಂದು ಒಂದೇ ದಿನ ದಿಢೀರ್ ಶೇ.90ರಷ್ಟು ಹೆಚ್ಚಳ ಕಂಡಿದೆ.
ಇಂದು ಹೊಸದಾಗಿ ದೇಶಾದ್ಯಂತ ಇಂದು ಒಂದೇ ದಿನದಲ್ಲಿ 2,183 ಹೊಸ ಸೋಂಕುಗಳೊಂದಿಗೆ ಕೋವಿಡ್ ಪ್ರಕರಣಗಳಲ್ಲಿ 90% ಏರಿಕೆಯಾಗಿದೆ. 24 ಗಂಟೆಗಳಲ್ಲಿ 214 ಸಾವುಗಳು ಸಂಭವಿಸಿವೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮತ್ತೊಂದೆಡೆ ಚೀನಾದಲ್ಲಿ ಲಾಕ್ ಡೌನ್ ಬಳಿಕ, ಶಾಂಘೈನಲ್ಲಿ ಮೊದಲ ಬಲಿಯನ್ನು ಕೊರೋನಾ ಪಡೆದುಕೊಂಡಿದೆ. ಈ ಮೂಲಕ ವಿಶ್ವದಲ್ಲಿ 4ನೇ ಅಲೆಯ ಆತಂಕವನ್ನು ಹುಟ್ಟು ಹಾಕಿದೆ.




