ಮಂಗಳೂರು: ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನು ಫ್ಯಾಕ್ಟರಿಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ, ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಐವರು ಗಂಭೀರ ಸ್ಥಿತಿ ತಲುಪಿರೋ ಘಟನೆ ನಡೆದಿದೆ.
ಮಂಗಳೂರಿನ ಎಸ್ ಇ ಝಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನು ಫ್ಯಾಕ್ಟರಿಯಲ್ಲಿ ನಿನ್ನೆ ರಾತ್ರಿ ವೇಳೆ ಕಾರ್ಮಿಕರನೊಬ್ಬ ತ್ಯಾಜ್ಯ ಘಟಕ ಶುಚಿಗೊಳಿಸೋ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಆತನ ರಕ್ಷಣೆಗಾಗಿ 8 ಕಾರ್ಮಿಕರು ಧಾವಿಸಿದಾಗ, ಅವರು ಅಸ್ವಸ್ಥಗೊಂಡಿದಾದರೆ.
ಕೂಡಲೇ ಇತರರು ಅವರನ್ನು ರಕ್ಷಿಸಿದ್ದಾರೆ. ಇವರಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದರೇ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೀನಿನ ತ್ಯಾಜ್ಯಕ್ಕೆ ಬಳಕೆ ಮಾಡುವ ವಿಷಾನಿಲ ಸೋರಿಕೆಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.




