ಗುತ್ತಿಗೆದಾರ ಸಂತೋಷ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ, ಕುಟುಂಬಸ್ಥರಿಗೆ 11 ಲಕ್ಷ ರೂ ಪರಿಹಾರದ ಚೆಕ್ ವಿತರಣೆ

ಬೆಳಗಾವಿ: ತಾಲೂಕಿನ ಬಡಸ ಗ್ರಾಮದಲ್ಲಿರುವಂತ ಗುತ್ತಿಗೆದಾರ ಸಂತೋಷ್ ನಿವಾಸಕ್ಕೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಸಂತೋಷ್ ಆತ್ಮಹತ್ಯೆ ಸಂಬಂಧ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದಂತ ಅವರು, ಕುಟುಂಬಸ್ಥರಿಗೆ 11 ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿನ ಆತ್ಮಹತ್ಯೆಗೆ ಶರಣಾದಂತ ಗುತ್ತಿಗೆದಾರ ಸಂತೋಷ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಭೇಟಿ ನೀಡಿದರು. ಕೆಪಿಸಿಸಿಯಿಂದ ಘೋಷಣೆ ಮಾಡಿದ್ದಂತ 11 ಲಕ್ಷ ರೂ ಪರಿಹಾರದ ಚೆಕ್ ಅನ್ನು ಅವರ ಪತ್ನಿಗೆ ವಿತರಿಸಿದರು.

ಈ ಬಳಿಕ ಮಾತನಾಡಿದಂತ ಅವರು, ಸಂತೋಷ್ ಸಾವಿಗೆ ನ್ಯಾಯ ಕೊಡಿಸುವವರೆಗೆ ಹೋರಾಡುತ್ತೇವೆ. ನ್ಯಾಯ ಕೊಡಿಸೋದಾಗಿಯೂ ಕುಟುಂಬಸ್ಥರಿಗೆ ಭರವಸೆ ನೀಡಿರೋದಾಗಿ ತಿಳಿಸಿದರು.

About The Author