ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ವಹಿಸಿದೆ. ಈ ತನಿಖೆ ಚುರುಕುಗೊಳಿಸಿರುವ ಅವರು, ಇಂದು 50 ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ನಿನ್ನೆ ಈ ಸಂಬಂಧ ಆಯ್ಕೆ ಪಟ್ಟಿಯಲ್ಲಿನ 50 ಅಭ್ಯರ್ಥಿಗಳಿಗೆ ಸಿಐಡಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಿಐಡಿ ಕಚೇರಿಗೆ 50 ಅಭ್ಯರ್ಥಿಗಳ ಪೈಕಿ 45 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನೂ ಐವರು ಅಭ್ಯರ್ಥಿಗಳು ವಿಚಾರಣೆಯಿಂದ ಗೈರಾಗಿದ್ದು, ಆ ಬಗ್ಗೆ ಸಿಐಡಿ ಪೊಲೀಸರು ಯಾವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಂತೂ ಇಂತು ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ತನಿಖೆಯಂತೂ ಚುರುಕಾಗಿಯೇ ನಡೆಯುತ್ತಿದೆ.




