ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಶೇ.40ರಷ್ಟು ಕಮೀಷನ್ ನಲ್ಲಿ ತೊಡಗಿದೆ. ದೆಹಲಿಯಲ್ಲಿ ಇರೋದು 0% ಸರ್ಕಾರವಾಗಿದೆ. ಕರ್ನಾಟಕದಲ್ಲಿ ಎಎಪಿ ಸರ್ಕಾರ ಬಂದ್ರೇ, ಶೂನ್ಯ ಕಮೀಷನ್ ಸರ್ಕಾರವಾಗಿ ಕೆಲಸ ಮಾಡಲಿದೆ ಎಂಬುದಾಗಿ ದೆಹಲಿಯ ಸಿಎಂ, ಎಎಪಿ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಲಾಗಿದ್ದಂತ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಇವನ್ನು ಅಹಂಕಾರದಿಂದಲೇ ಜಾರಿ ಮಾಡಿತ್ತು. ಆದ್ರೇ.. ಲಂಕಾಧಿಪತಿ ಅಹಂಕಾರ ಇಳಿದಂತೆ ರೈತರ ಹೋರಾಟದ ಪರಿಣಾಮ, ಮೋದಿ ಅಹಂಕಾರವೂ ಇಳಿದು, ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಆಯ್ತು ಎಂದರು.
ದೆಹಲಿ, ಪಂಜಾಬ್ ನಲ್ಲಿ ನಮ್ಮ ಎಎಪಿ ಸರ್ಕಾರವಿದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿರುವಂತ ಶೇ.40ರಷ್ಟು ಕಮೀಷನ್ ಸರ್ಕಾರ ಹೋಗಬೇಕು. ದೆಹಲಿಯಂತೆ 0 ಪರ್ಸೆಂಟ್ ಸರ್ಕಾರ ಕರ್ನಾಟಕದಲ್ಲೂ ಬರೋದಕ್ಕೆ ರಾಜ್ಯದ ಜನತೆ ಎಎಪಿಗೆ ಮುಂಬರುವ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿದರು.
ನಾನು ಸಾಮಾನ್ಯ ಮನುಷ್ಯ, ಹೆಂಡತಿ ಮಕ್ಕಳು ಇದ್ದಾರೆ. ನನಗೆ ಸಾಮಾನ್ಯ ಜನರ ಸಮಸ್ಯೆ ಚನ್ನಾಗಿಗೊತ್ತಿದೆ. ಸಾಮಾನ್ಯ ಜನರಿಗೆ ಶಾಲೆ, ಆರೋಗ್ಯ ಮುಖ್ಯವಾಗಿದೆ. ಅದನ್ನು ದೆಹಲಿಯಲ್ಲಿ ಮಾಡಿದ್ದೇವೆ. ರಾಜ್ಯದಲ್ಲಿ ಶಾಲೆ, ಆಸ್ಪತ್ರೆ ಹದಗೆಟ್ಟಿವೆ. ಅದನ್ನು ಸರಿ ಮಾಡಬೇಕು. ದೆಹಲಿ ಶಾಲೆಯಲ್ಲಿ 99% ಫಲಿತಾಂಶ ಬಂದಿದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ. ನೀವು ಕೂಡ ದೆಹಲಿ ಶಾಲೆ ನೋಡಿ ಎಂದರು.



