ಬೆಂಗಳೂರು:ಶಿವಮೊಗ್ಗ ಏರ್ಪೋರ್ಟ್ ಶೀಘ್ರ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದೀರಾ, ಇದಕ್ಕೆ ಸಿಎಂ ಬೊಮ್ಮಾಯಿ ಧನ್ಯವಾದಗಳು. ಆದ್ರೆ ನನ್ನ ಹೆಸರನ್ನ ಏರ್ಪೋರ್ಟ್ ಇಡುವ ಕುರಿತು ಘೋಷಣೆ ಮಾಡಿದ್ದೀರಾ. ನಿಮ್ಮ ಪ್ರೀತಿ ಅಭಿಮಾನಕ್ಕೆ ನನ್ನ ಧನ್ಯವಾದಗಳು.ಆದ್ರೇ ನನ್ನ ಹೆಸರಿಡಬೇಡಿ. ನಾಡಿನ ಅಭಿವೃದ್ಧಿಗೆ ಶ್ರಮಿಸಿದಂತ ಮಹನೀಯರ ಹೆಸರಿಡುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಶಿವಮೊಗ್ಗ ಏರ್ಪೋರ್ಟ್ ಗೆ ಬಿಎಸ್ ವೈ ಹೆಸರು ನಾಮಕರಣ ವಿಚಾರವಾಗಿ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪತ್ರ ಬರೆದಿದ್ದು, ರಾಷ್ಟ್ರಕ್ಕೆ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು, ದೇಶ ಭಕ್ತರ ಇದ್ದಾರೆ. ಅವರು ನೀಡಿರುವ ಕೊಡುಗೆ ಹೋಲಿಸಿದಾಗ ನನ್ನದು ಅಳಿಲು ಸೇವೆಯಾಗಿದೆ. ತನ್ನ ಬೆಂಬಲಿಸಿದ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲದೇ, ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿಸುವಂತೆ ಮನವಿ ಮಾಡಿರುವಂತ ಅವರು, ದೇಶಕ್ಕಾಗಿ ಇತಿಹಾಸಕ್ಕೆ ಕೊಡುಗೆ ನೀಡಿದವರ ಹೆಸರನ್ನ ಏರ್ಪೋರ್ಟ್ ಗೆ ಇಡಿ ಎಂದು ಯಡಿಯೂರಪ್ಪ ಸಿಎಂಗೆ ಮನವಿ ಮಾಡಿದ್ದಾರೆ. ಈ ಮೂಲಕ ಸಿಎಂ ಬೊಮ್ಮಾಯಿಗೆ ಪತ್ರದಲ್ಲಿ ಕೋರಿಕೊಂಡಿದ್ದಾರೆ.




