ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರ ನಿರಂತರ ಜಿಲ್ಲಾ ಪ್ರವಾಸದ ಹಿಂದಿನ ಲೆಕ್ಕಾಚಾರವೇನು ? ಎನ್ನುವ ತೀವ್ರ ಕುತೂಹಲ ರಾಜ್ಯ ರಾಜಕೀಯ ವಲಯದಲ್ಲಿ ಹುಟ್ಟಿದೆ. ಅದರಲ್ಲೂ ಕಾರ್ಯಕಾರಿಣಿ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸವನ್ನು ಸಿಎಂ ಮಾಡ್ತಾ ಇದ್ದಾರೆ.
ಬ್ಯಾಕ್ ಟು ಬ್ಯಾಕ್ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಬೊಮ್ಮಾಯಿ, ಹೈಕಮಾಂಡ್ ಸೂಚನೆ ಮೇರೆಗೆ ಜಿಲ್ಲಾ ಪ್ರವಾಸ ಹೊರಟಿದ್ದಾರಾ ? ಎನ್ನುವ ಕುತೂಹಲ ಹುಟ್ಟುಹಾಕಿದೆ. ಇಲ್ಲವೇ ತಮ್ಮದೇ ರಾಜಕೀಯ ಲೆಕ್ಕಾಚಾರದೊಂದಿಗೆ ಹೊರಟಿದ್ದಾರಾ ? ಎನ್ನುವಂತ ಮತ್ತೊಂದು ಕುತೂಹಲವೂ ಮೂಡಿದೆ.
ಇನ್ನೂ ಕಳೆದ ಒಂದೇ ವಾರ ಐದು ದಿನಗಳ ಕಾಲ ನಿರಂತರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಬೊಮ್ಮಾಯಿ, ಶಿವಮೊಗ್ಗ, ತುಮಕೂರು, ಕಲಬುರಗಿ, ಬದಾಮಿ, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ಪ್ರವಾಸದ ವೇಳೆ ವಿವಿಧ ಕಾಮಗಾರಿಗಳಿಗೆ ಚಾಲನೆ, ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದಾರೆ.
ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಪ್ರವಾಸವನ್ನು ಸಿಎಂ ಬೊಮ್ಮಾಯಿ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಗಳ ಪ್ರವಾಸ ನೀಡುತ್ತಿದ್ದಾರೆ. ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೆ ನಿರಂತರ ಪ್ರವಾಸ ನಡೆಸುತ್ತಿರುವ ಸಿಎಂ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.




