BREAKING NEWS: PSI ನೇಮಕಾತಿ ಅಕ್ರಮ: ಮತ್ತೆ ಸಿಐಡಿಯಿಂದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖೆ ನಡೆಸುತ್ತಿರುವಂತ ಸಿಐಡಿ ಪೊಲೀಸರು ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಜಾರಿಗೊಳಿಸಿದ್ದರು. ಆದ್ರೇ.. ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಮತ್ತೆ 2ನೇ ಬಾರಿ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈ ಕುರಿತು ಸಿಐಡಿ ಪೊಲೀಸರಿಂದ ನೋಟಿಸ್ ಅನ್ನು 2ನೇ ಬಾರಿ ಶಾಸಕ ಪ್ರಿಯಾಂಕ್ ಖರ್ಗೆಗೆ ಜಾರಿಗೊಳಿಸಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ ಕುರಿತಂತೆ ತಮ್ಮ ಬಳಿ ಇರುವಂತ ಸಾಕ್ಷ್ಯ, ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.

ಸಿಐಡಿ ಪೊಲೀಸರು ನೀಡಿದ್ದಂತ ಈ ಮೊದಲ ನೋಟಿಸ್ ಗೆ ಶಾಸಕ ಪ್ರಿಯಾಂಕ್ ಖರ್ಗೆ ಉತ್ತರಿಸಿರಲಿಲ್ಲ. ಇದೀಗ 2ನೇ ಬಾರಿ ನೀಡಿರುವಂತ ನೋಟಿಸ್ ನಿಂದಾಗಿ ಶಾಸಕರು ಸಿಐಡಿ ಪೊಲೀಸರು ಮುಂದೆ ವಿಚಾರಣೆಗೆ ಹಾಜರಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

About The Author