How u can ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಲು ಸಾಧ್ಯ.? – ಡಿ ಕೆ ಶಿವಕುಮಾರ್ ಪ್ರಶ್ನೆ

ಬೆಂಗಳೂರು: How u can ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಲು ಸಾಧ್ಯ……? ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಯಾವ ಸಂದೇಶ ಹೋಗಿದೆ ಗೊತ್ತಾ? ಬೇರೆ ಬೇರೆ ಇಲಾಖೆಗಳಲ್ಲೂ ನಡೀತಿದೆ. ಇದರ ಬಗ್ಗೆ ಯಾವ ಸಚಿವರೂ ಯಾಕೆ ಮಾತಾಡ್ತೀಲ್ಲ. ನಮ್ಮ ವಿರೋಧ ಪಕ್ಷದ ನಾಯಕರು ರಾಜೀನಾಮೆ ಕೇಳಿದ್ದಾರೆ. ನೀವು ರಾಜೀನಾಮೆ ಕೊಡಲ್ಲ ಅಂತ ಗೊತ್ತಿದೆ. ಈ ಅಕ್ರಮಕ್ಕೆ ಮೂಲ ಪಾಲುದಾರರು ನೀವೆ ಎಂದು ಮುಚ್ಚಿಕೊಳ್ಳಲು ಹೊರಟಿದ್ದೀರಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸರ್ಕಾರ ಅಕ್ರಮಗಳನ್ನ ಹೊತ್ತುಕೊಂಡಿದೆ. ನಾವು ಹೇಳುವ ಮೊದಲೇ ನೀವೇ ಬಹಿರಂಗ ಮಾಡಬೇಕು. ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿ, ನಿಮ್ಮ ಪಕ್ಷ ಪಿಳಿ ಪಿಳಿ ಅಂತ ಒದ್ದಾಡ್ತಿದೆ ಎಂದರು.

ಯಾವ್ಯಾವ ಮಂತ್ರಿಗಳು, ಆಪೀಸರ್ ಇದಾರೆ ಎಂದು ತಿಳಿಯುವ ಮುನ್ನ, ಮರು ಪರೀಕ್ಷೆ ಮಾಡಿದ್ದಾರೆ. ದಲಿತ ಅಧಿಕಾರಿಯನ್ನ ಶಿಪ್ಟ್ ಮಾಡಿ, ಬೇರೆಯವರನ್ನ ಹಾಕಿದ್ದೀರಿ. ದಲಿತರ ಮೇಲೆ ತಮಗೆ ನಂಬಿಕೆ ಇಲ್ಲ. ಅಂತರಿಕ ಭಧ್ರತೆ ತಮಗೆ ಬಿಟ್ಟ ವಿಚಾರವಾಗಿದೆ. ತನಿಖಾ ವರದಿ ಬರದೆ, ದೊಡ್ಡ ಹಗರಣ ಇದು. 52 ಸಾವಿರ ಜನ ಪರೀಕ್ಷೆ ಬರೆದಿದ್ದಾರೆ, ಕೆಲವರು ಪಾಸ್ ಆಗಿದ್ದಾರೆ. ಯಾರು ಕಾರಣ ಎಂಬುದು ಬಯಲಾಗಿಲ್ಲ ಎಂದರು.

ಯಾವನೋ ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅಂದ್ರಿ. ನಿಮ್ಮ ಮುತ್ತು ರತ್ನಗಳು ಆಚೆ ಬರಬೇಕಲ್ವ. 8-10ಜನ ಬಂದು ಮನವಿ ಪತ್ರ ಕೊಟ್ರೆ, ಕಟ್ ಮಾಡಿ ನನ್ನ ಪೋಟೋ ಹಾಕಿದ್ದಾರೆ. ನಾ ಏನು ದ್ರಾಕ್ಷಿ ಗೊಂಡಬಿ ತಿನ್ನಲು ಹೋಗಿರಲಿಲ್ಲ ಎಂಬುದಾಗಿ ಕಿಡಿಕಾರಿದರು.

About The Author