ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ, ನಾಪತ್ತೆಯಾಗಿರುವಂತ ಕಿರಾತಕ ನಾಗೇಶ್ ಬಂಧನಕ್ಕಾಗಿ, ಪೊಲೀಸರು ಈಗ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಎಲ್ಲಾ ರಾಜ್ಯಗಳ ಪೊಲೀಸರಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವಂತ ಬೆಂಗಳೂರು ನಗರ ಪೊಲೀಸರು, ಕಿರಾತಕ ನಾಗೇಶ್ ಮಾಹಿತಿ ಇದ್ದರೇ ನೀಡುವಂತೆ, ಬಂಧಿಸುವಂತೆ ಕೋರಿಕೊಂಡಿದ್ದಾರೆ.
ಅಂದಹಾಗೇ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವಂತ ನಾಗೇಶ್ ತಮಿಳುನಾಡಿನಲ್ಲಿ ಅವಿತಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಅಲ್ಲಿನ ದೇಗುಲಗಳಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ.




