ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರೋ ಕೋವಿಡ್ ನಿಯಂತ್ರಣಕ್ಕಾಗಿ, ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಇಂದಿನಿಂದ ಕಡ್ಡಾಯಗೊಳಿಸಲಾಗುತ್ತಿದೆ. ಒಂದು ವೇಳೆ ಮಾಸ್ಕ್ ಇಲ್ಲದೇ ಹೊರಗೆ ಓಡಾಡಿದ್ರೇ.. ದಂಡ ಫಿಕ್ಸ್ ಆಗಿದೆ.
ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯ ನಿಯಮ ಜಾರಿಯಾಗುತ್ತಿದೆ. ಮಾಸ್ಕ್ ಇಲ್ಲದೇ ಹೊರಗೆ ಓಡಾಡೋರಿಗೆ ಬಿಬಿಎಂಪಿಯ ಮಾರ್ಷಲ್, ಪೊಲೀಸರು ರೂ.250 ದಂಡವನ್ನು ವಿಧಿಸಲಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಈ ನಿಯಮ ಜಾರಿಗೊಳಿಸಲಾಗಿದೆ. ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ, ಕೊರೋನಾ ಓಡಿಸಿ ಎನ್ನುವುದು ಸಾರ್ವಜನಿಕರಲ್ಲಿ ನಮ್ಮ ಮನವಿ ಕೂಡ ಆಗಿದೆ.




