ಧಾರವಾಡ: ಕನ್ನಡದ ಹಿರಿಯ ರಂಗ ಕಲಾವಿದೆಯಾಗಿ ಗುರ್ತಿಸಿಕೊಂಡಿದ್ದಂತ ಲಕ್ಷ್ಮೀಬಾಯಿ ಏಣಗಿಯವರು ( 95 ) ಇಂದು ನಿಧನರಾಗಿದ್ದಾರೆ. ಈ ಮೂಲಕ ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಇನ್ನಿಲ್ಲವಾಗಿದ್ದಾರೆ.
ಅಂದಹಾಗೇ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ ಅವರ ಪತ್ನಿ, ಲಕ್ಷ್ಮೀಬಾಯಿ ಏಣಗಿ. ಏಣಗಿ ಬಾಳಪ್ಪ ಅವರೊಂದಿಗೆ ಹಲವು ನಾಟಕ, ಸಿನಿಮಾಗಳಲ್ಲಿಯೂ ಲಕ್ಷ್ಮೀಬಾಯಿ ಏಣಗಿ ನಟಿಸಿದ್ದರು. ಅದರಲ್ಲೂ ಸಿಂಗಾರವ್ವ ಚಲನಚಿತ್ರದಲ್ಲಿನ ಅವರ ಅಭಿನಯವನ್ನು ಯಾರೂ ಮರೆಯುವಂತಿಲ್ಲ.
ಇಂದು ನಿಧನರಾದಂತ ಲಕ್ಷ್ಮೀಬಾಯಿ ಏಣಗಿಯವರ ಅಂತ್ಯಸಂಸ್ಕಾರ, ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಕುಟುಂಬಸ್ಥರು ನೆರವೇರಿಸಲಿದ್ದಾರೆ.




