ಶಿವಕುಮಾರ್ ಭ್ರಷ್ಟಾಚಾರದ ಗ್ಯಾಂಗ್ ಲೀಡರ್, ನಿರಾಧಾರವಾಗಿ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ – ಸಚಿವ ಅಶ್ವತ್ಥನಾರಾಯಣ ಖಡಕ್ ಎಚ್ಚರಿಕೆ

ಬೆಂಗಳೂರು: ದರ್ಶನ್ ಗೌಡ ತಂದೆ ಅಶ್ವಥ ನಾರಾಯಣ್ ನಮ್ಮ ಸಂಬಂಧಿಕರು ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದಲ್ಲಿ ನನ್ನ ಮುಂದಿನ ಕ್ರಮ ಏನೂ ಅನ್ನೋದನ್ನ ತಿಳಿಸುತ್ತೇನೆ. ನಿರಾಧರವಾಗಿ ಈ ಹೇಳಿಕೆಗಳನ್ನ ಕೊಡಬಾರದು. ಯಾವ ಆಧಾರದ ಮೇಲೆ ಅವರು ಹೇಳಿಕೆಗಳನ್ನ ಕೊಟ್ಟಿದ್ದಾರೆ ಅನ್ನೋದನ್ನ ಮಾಧ್ಯಮದವರು ಪರಿಶೀಲಿಸಬೇಕು. ಉತ್ತಮವಾದ ವ್ಯಕ್ತಿ ಮೇಲೆ ಈ ರೀತಿ ನಿರಾಧರವಾಗಿ ಆರೋಪ ಮಾಡುವುದನ್ನ ಖಂಡಿಸುತ್ತೇನೆ. ನಾನು ಓಪನ್ ಬುಕ್ ನಾನು ಪ್ರಗತಿ ಪರ ಸಮಾಜ ಕಟ್ಟೋಕೆ ಬಂದಿದ್ದೇನೆ. ಇವರಂಗೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಬಂದಿಲ್ಲ ಎಂಬುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ್, ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ಎಲ್ಲಾ ಕಡೆ ಮುಳುಗಿಹೋಗಿದೆ. ಇಂಥಹವರ ಆರೋಪಕ್ಕೆ ಕಿಮ್ಮತ್ತಿಲ್ಲ. ನಮ್ಮ ಇಲಾಖೆಯಲ್ಲೂ ನಡೆದಿರುವ ಪ್ರಾಧ್ಯಪಕರ ಪರೀಕ್ಷೆಯನ್ನು ಮುಚ್ಚುಹಾಕುವ ಪ್ರಶ್ನೇ ಇಲ್ಲ. ಮುಚ್ಚಿಹಾಕುವುದೆಲ್ಲ ಕಾಂಗ್ರೆಸ್ ಸಂಸ್ಕೃತಿ. ನಾವೂ ತನಿಖೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.

ಡಿಕೆಶಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಗೌಡರು ಸಂಬಂಧಿಕರೇ ಆಗಿದ್ದಾರೆ. ನಾನು ಒಕ್ಕಲಿಗರ GPA ಹೋಲ್ಡರ್. ವಿಶ್ವದಲ್ಲಿರುವ ಒಕ್ಕಲಿಗರೆಲ್ಲಾ ನಮ್ಮ ಸಂಬಂಧಿಕರು, ಜೊತೆಗಿರುವವರು ಹಿಂಬಾಲಕರು. ಹೌದು ನಾನು ವಿಶ್ವ ಮಾನವ ಒಕ್ಕಲಿಗ ನಾನು ವಿಶ್ವ ಮಾನವ ಕೂಡ. ವಿಶ್ವ ಮಾನವ ಆಧಾರಿತವಾಗಿ ತೋರಿಸಿಕೊಟ್ಟವರು ಕುವೆಂಪು ಎಂದರು.

ಕಮಲ್ ಪಂಥ್ ಈ ಪ್ರಕರಣವನ್ನ ಬಿಡುಗಡೆ ಮಾಡಿದ್ದಾರೆ ಅಂತಾ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರ್ ಯಾರ್ ಏನೇನು ಹೇಳಿಕೆ ಕೊಡ್ತಾರೋ ಅದಕ್ಕೆಲ್ಲ ಹೇಳೋಕೆ ಆಗಲ್ಲ. ಅವರ ಹೇಳಿಕೆಗಳಿಗೆ ಅವರೇ ಬದ್ಧವಾಗಿರಬೇಕು ಎಂದರು.

ಶಿವಕುಮಾರ್ ಭ್ರಷ್ಟಾಚಾರದ ಗ್ಯಾಂಗ್ ಲೀಡರ್. ನಿರಾಧಾರವಾಗಿ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ ಎಂಬುದಾಗಿ ಇದೇ ಸಂದರ್ಭದಲ್ಲಿ ಖಡಕ್ ಎಚ್ಚರಿಕೆ ನೀಡಿದರು.

About The Author