ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಯಾರ ಬಳಿ ಯಾವುದೇ ಆಧಾರ, ಸಾಕ್ಷಿ ಇದ್ದರೂ ತಂದು ಕೊಡಲಿ. ಡಾ.ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಹಿಟ್ ಅಂಡ್ ರನ್ ಆರೋಪ ಮಾಡುತ್ತಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಾಕ್ಷ್ಯ, ಆಧಾರ ಇಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಕಾಂಗ್ರೆಸ್ನವರ ಆಧಾರ ರಹಿತ ಆರೋಪಕ್ಕೆ ಜನ ಮನ್ನಣೆ ಕೊಡುವುದಿಲ್ಲ ಎಂಬುದಾಗಿ ಖಡಕ್ ಉತ್ತರವನ್ನು ಪ್ರತಿ ಪಕ್ಷ ನಾಯಕರಿಗೆ ನೀಡಿದರು.




