BREAKING NEWS: ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ | Sandalwood Comedian Mohan Juneja No More

ಬೆಂಗಳೂರು: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಕನ್ನಡದ ಹಿರಿಯ ಹಾಸ್ಯ ಕಲಾವಿದ ಮೋಹನ್ ಜುನೇಜ ಇಂದು ನಿಧನರಾಗಿದ್ದಾರೆ. ಈ ಮೂಲಕ ಚೆಂದನವನದ ಹಾಸ್ಯ ನಟ ಇನ್ನಿಲ್ಲವಾಗಿದ್ದಾರೆ.

ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಬಾಲಿವುಡ್ ಮಂದಿಗೆ ಟಕ್ಕರ್ ಕೊಟ್ಟಂತ ಖ್ಯಾತ ಕನ್ನಡ ಚಿತ್ರ ಕೆಜಿಎಫ್ ನಲ್ಲಿ ರಾಕಿ ಬಾಯ್ ಗುಣಗಾನ ಮಾಡುವ ಪಾತ್ರದಲ್ಲಿ ಮೋಹನ್ ಜುನೇಜ ಮಿಂಚಿದ್ದರು. ಇದಲ್ಲದೇ ಕನ್ನಡದ ಅನೇಕ ನಟ-ನಟಿಯರೊಂದಿಗೂ ಅವರು ನಟಿಸಿ, ಖ್ಯಾತ ಹಾಸ್ಯ ಕಲಾವಿದರಾಗಿ ಗುರ್ತಿಸಿಕೊಂಡಿದ್ದರು. ಇಂತಹ ಮೋಹನ್ ಜುನೇಜ ಇದೀಗ ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ.

About The Author