ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಈಗಾಗಲೇ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವಂತ ಡಿವೈಎಸ್ಪಿ ಹಾಗೂ ಸಿಪಿಐ ಅಧಿಕಾರಿಗಳನ್ನು ಇದೀಗ ಅಮಾತನಗೊಳಿಸಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಸಿಪಿಐ ಆನಂದ ಮೇತ್ರಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಇವರಿಪ್ಪರನ್ನು ನ್ಯಾಯಾಲಯವು ಸಿಐಡಿ ವಶಕ್ಕೂ ನೀಡಿದೆ. ಈ ಬೆನ್ನಲ್ಲೇ ಈ ಇಬ್ಬರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಮತ್ತೊಂದೆಡೆ ಪೊಲೀಸ್ ನೇಮಕಾತಿ ವಿಭಾಗದಲ್ಲಿನ 17 ಅಧಿಕಾರಿ, ಸಿಬ್ಬಂದಿಗಳಲ್ಲಿ 7 ಮಂದಿಯನ್ನು ಹೊರತು ಪಡಿಸಿ, 10 ಜನರನ್ನು ಸರ್ಕಾರ ವರ್ಗಾವಣೆ ಕೂಡ ಮಾಡಿದೆ. ಈ ಮೂಲಕ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಹಿತೇಂದ್ರ ಅವರನ್ನು ನೇಮಿಸಿರೋದಲ್ಲದೇ, ಹೊಸ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿದೆ.



