ಕಲಬುರಗಿಯ ಅನುರಾಧ, ಹೃದಯ ಚಿಕಿತ್ಸೆಗೆ 2 ಲಕ್ಷ ಪರಿಹಾರ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೆರೆಗೆ ಕಲಬುರಗಿ ಕನ್ನಡ ಬಂಧು ಪತ್ರಿಕೆಯ ಸಂಪಾದಕಿ ಶ್ರೀಮತಿ ಅನುರಾಧ ಕುಲಕರ್ಣಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.

ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಲಕರ್ಣಿ ಅವರು ಮೃತಪಟ್ಟ ಬಳಿಕ ಅವರ ಪತ್ನಿ ಅನುರಾಧ ಕುಲಕರ್ಣಿ ಪತ್ರಿಕೆ ಜವಾಬ್ದಾರಿ ಹೊತ್ತಿದ್ದರು. ಈಗ ಅವರ ಪುತ್ರ ನಿಭಾಯಿಸುತ್ತಿದ್ದಾರೆ.

ಅನುರಾಧ ಕುಲಕರ್ಣಿ ಅವರು ಇತ್ತೀಚಿಗೆ ತೀವ್ರ ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲಾಗಿ ಹೃದಯ ಸರ್ಜರಿಯಾಗಿದ್ದು ಸುಮಾರು ನಾಲ್ಕು ಲಕ್ಷ ಕ್ಕೂ ಹೆಚ್ಚು ಖರ್ಚು ಮಾಡಿಕೊಂಡಿದ್ದರು. ಈ ಬಗ್ಗೆ ಕೆಯುಡಬ್ಲ್ಯೂಜೆ ಗೆ ಮನವಿ ಸಲ್ಲಿಸಿ ನೆರವಿಗೆ ಕೋರಿದ್ದರು. ನೆರವು ಕೊಡಿಸುವಂತೆ ಕಲಬುರಗಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಮನವಿ ಮಾಡಿತ್ತು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮನವಿ ಮೇರೆಗೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಿಹಾರ ಮಂಜೂರು ಮಾಡಿದ್ದಾರೆ.

ಪರಿಹಾರ ಮಂಜೂರು ಮಾಡಲು ಆದೇಶಿಸಿದ ಮುಖ್ಯಮಂತ್ರಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ಕೃತಜ್ಞತೆ ಸಲ್ಲಿಸಿದೆ.

About The Author