Saturday, December 28, 2024

Latest Posts

ಡ್ರ್ಯಾಗನ್‌ ಫ್ರೂಟ್‌ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ತಿಳಿಯಿರಿ.!

- Advertisement -

ಡ್ರ್ಯಾಗನ್ ​ ಹಣ್ಣು ಬೇರೆ ಹಣ್ಣುಗಳಿಗಿಂತ ಆಕಾರ ಮತ್ತು ಬಣ್ಣದಲ್ಲಿ ವಿಭಿನ್ನವಾಗಿದೆ. ಈ ಹಣ್ಣು ದಕ್ಷಿಣ ಅಮೆರಿಕದಲ್ಲಿ ಹುಟ್ಟಿ ನಂತರ ಪೂರ್ವ ಏಷ್ಯಾಕ್ಕೆ ಹರಡಿದ್ದು, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಜನರು ಡ್ರ್ಯಾಗನ್ ​ಹಣ್ಣನ್ನು ಅತಿ ಹೆಚ್ಚು ಸೇವಿಸುತ್ತಾರೆ.

ಡ್ರ್ಯಾಗನ್ ​ ಹಣ್ಣು ಸಣ್ಣ ಆಗಬೇಕೆಂಬುವವರಿಗೆ ಬಹಳ ಉಪಯೋಗವಾಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಹೆಚ್ಚಿನ ಕ್ಯಾಲೊರಿಗಳಿಲ್ಲ. ತಿರುಳು ಬಿಳಿಯಾಗಿರುತ್ತದೆ ಹಾಗೂ ಮಧ್ಯದಲ್ಲಿ ಬೀಜಗಳಿದ್ದು, ತಿನ್ನುವವರು ಮಧ್ಯದಲ್ಲಿರುವ ಬೀಜಗಳನ್ನು ಸೇರಿಸಿ ತಿನ್ನುತ್ತಾರೆ.

ಡ್ರ್ಯಾಗನ್‌ ಹಣ್ಣು ಪೋಷಕಾಂಶಗಳ ಕಣಜವನ್ನು ಹೊಂದಿರುವ ಹಣ್ಣಾಗಿದ್ದು, ಇದರಲ್ಲಿ ಸ್ವಲ್ಪ ಸಿಹಿ ರುಚಿಯೊಂದಿಗೆ ರಸಭರಿತವಾಗಿರುತ್ತದೆ. ಇದು ಪೇರಳೆ, ಕಿವಿ, ಮತ್ತು ಕಲ್ಲಂಗಡಿ ಹಣ್ಣುಗಳನ್ನು ಹೋಲುತ್ತದೆ. ಅದಷ್ಟೇ ಅಲ್ಲದೆ ಈ ಹಣ್ಣಿನ ಬೀಜಗಳು ಅಡಿಕೆ ಪರಿಮಳವನ್ನು ಹೊಂದಿದೆ. ಒಟ್ಟಾರೆ ಇದೊಂದು ಸೂಪರ್ ಫ್ರೂಟ್‌ಗಳಲ್ಲಿ ಒಂದಾಗಿದೆ. ಈ ರಸಭರಿತವಾದ ಹಣ್ಣಿನ ಜ್ಯೂಸ್‌ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದರ ಡೀಟೇಲ್ಸ್ ಇಲ್ಲಿದೆ.

ಸೂಪರ್‌ ಫ್ರೂಟ್‌ ಎಂದು ಕರೆಯುವಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನ ಹೊಂದಿದೆ. ಇದು ಸುಮಾರು 60 ಕ್ಯಾಲೋರಿಗಳನ್ನು ಹೊಂದಿದೆ. ಜೊತೆಗೆ ಇದರಲ್ಲಿ ವಿಟಮಿನ್‌ ಸಿ, ಬಿ1, ಬಿ2, ಬಿ3 ಮತ್ತು ಕಬ್ಬಿಣ, ಕ್ಯಾಲ್ಸಿಯಂ ಅನ್ನು ಹೊಂದಿದೆ. ಹಾಗೂ ತೂಕ ಕಡಿಮೆ ಮಾಡಿಕೊಳ್ಳುವವರು ಈ ಹಣ್ಣಿನ ಜ್ಯೂಸ್‌ ಅಥವಾ ಹಣ್ಣನ್ನು ಸೇವನೆ ಮಾಡಬಹುದಾಗಿದೆ. ಅದಷ್ಟೇ ಅಲ್ಲದೆ ಹೃದಯದ ಸಮಸ್ಯಕ್ಕೆ ಡ್ರ್ಯಾಗನ್ ಹಣ್ಣನ್ನು ಸೇವನೆ ಮಾಡಿ. ಮತ್ತು ಈ ಹಣ್ಣಿನ ರಸ ನಿಮ್ಮ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ಜೀರ್ಣವಾಗುವ ಫೈಬರ್ ಅಂಶ ಇರುವುದರಿಂದ. ಇದು ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು. ಮಧುಮೇಹ ಹೊಂದಿರುವವರು ಕೂಡ ಈ ಹಣ್ಣನ್ನು ಸೇವಿಸಬಹುದು. ಸಂಪರ್ಕ ಮಾಡುವುದು ಒಳ್ಳೆಯದು. ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಿ, ತ್ವಚೆಯನ್ನು ಬಿಗಿಯಾಗಿ ಮತ್ತು ಯೌವನದಿಂದ ಇಡಲು ಡ್ರ್ಯಾಗನ್‌ ಫ್ರೂಟ್‌ ಸಹಾಯ ಮಾಡುತ್ತದೆ. ಅದಷ್ಟೇ ಅಲ್ಲದೆ ಡ್ರ್ಯಾಗನ್ ಫ್ರೂಟ್‌ಯಿಂದ ಫೇಸ್ ಪ್ಯಾಕ್ ಮಾಡಿ ತ್ವಚೆಗೆ ಬಳಸಬಹುದು.

ಡ್ರ್ಯಾಗನ್ ಫ್ರೂಟ್‌ ಹಣ್ಣುಗಳನ್ನು ಸೂಪರ್​ ಮಾರ್ಕೆಟ್​​ಗಳಲ್ಲಿ ನೋಡಬಹುದು. ಪ್ರತಿ ಹಣ್ಣಿನ ಬೆಲೆ 70 ರೂ. ರಿಂದ 100 ರೂ. ವರೆಗೆ ಇರುತ್ತದೆ. ಅನೇಕರು ರುಚಿ ನೋಡಲು ಹಣ್ಣನ್ನು ಖರೀದಿಸುತ್ತಿದ್ದು, ಈ ಹಣ್ಣಿನ ರುಚಿ ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿಯಾಗಿರುತ್ತವೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

- Advertisement -

Latest Posts

Don't Miss