BREAKING NEWS: ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ ಗ್ರೀನ್ ಸಿಗ್ನಲ್

ಬೆಂಗಳೂರು: ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆ ನಡೆಸಲು ಅನುಮತಿ ನೀಡಿದೆ. ಈ ಆದೇಶವು ರಾಜ್ಯದಮಟ್ಟಿಗೆ ಇಂದು ಮಹತ್ವದ ಬೆಳವಣಿಗೆ ಆಗಿದೆ. ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಇದು ಮಧ್ಯಪ್ರದೇಶಕ್ಕೆ ಸಂಬಂಧಿಸಿದ ತೀರ್ಪು ಆದರೂ ಇಡೀ ದೇಶಕ್ಕೆ ಅನ್ವಯಿಸಲಿದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ ಬಾರಿ ಎಷ್ಟು ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತೋ ಅಷ್ಟೇ ವಾರ್ಡ್ ಗೆ ಚುನಾವಣೆ ನಡೆಯಲಿದೆ. 1988 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿದೆ. ಇದು ಮಹತ್ವದ ತೀರ್ಪು ಆಗಿದೆ. ಈ ಬಗ್ಗೆ ಸಿಎಂ ಜೊತೆ ಮಾತನ್ನಾಡುತ್ತೇನೆ ಎಂದರು.

ಈಗಾಗಲೇ ದೆಹಲಿಯಿಂದ ದೂರವಾಣಿ ಕರೆ ಬಂದಿತ್ತು. ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಚುನಾವಣೆ ಯಾವಾಗಲೇ ಬಂದರೂ ತಯಾರಿ ಇದ್ದೇವೆ. ಚುನಾವಣೆಗೆ ನಾವು ಹೆದರುವುದಿಲ್ಲ. ಯಾವಾಗ ಘೋಷಣೆಯಾದರೂ ಸಿದ್ಧರಿದ್ದೇವೆ ಎಂದರು.

ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸುತ್ತೇನೆ. ಬೆಂಗಳೂರು ವಿಸ್ತಾರವಾಗಿ ಬೆಳೆದಿದೆ. ಚುನಾವಣೆ ವಿಳಂಬವಾಗುವ ಪ್ರಶ್ನೆಯೇ ಬರುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಸರ್ಕಾರ ಚುನಾವಣೆ ನಡೆಸಲು ತಯಾರಿದೆ ಎಂದರು.

ಪಕ್ಷದ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ. ಎರಡು ವಾರದೊಳಗೆ ಚುನಾವಣೆ ಘೋಷಣೆ ಮಾಡುವಂತೆ ಸೂಚಿಸಿದೆ. ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಬೇಕಿದೆ ಅಷ್ಟೇ ಎಂದು ಹೇಳಿದರು.

ನಮಗೆ ಯಾವುದೇ ಪಕ್ಷ ಪ್ರತಿಸ್ಪರ್ಧಿ ಅಲ್ಲ. ನಮಗೆ ಕಾಂಗ್ರೆಸ್, ಜೆಡಿಎಸ್ ಸಮಬಲದ ಹೋರಾಟ ನೀಡಲು ಸಾಧ್ಯವಿಲ್ಲ. ಆಮ್ ಆದ್ಮಿಗೆ ಇನ್ನೂ ನೆಲೆಯೇ ಇಲ್ಲ. ಹಾಗಾಗಿ ಮತ್ತೆ ನಮ್ಮದೇ ಪಕ್ಷ ಗೆಲ್ಲಲಿದೆ ಎಂದು ತಿಳಿಸಿದರು.

About The Author