Thursday, October 23, 2025

Latest Posts

ಟೊಮೆಟೋ ಜ್ವರದ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.!

- Advertisement -

ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕವೇ ಇನ್ನೂ ದೂರವಾಗಿಲ್ಲ. ಈಗಿರುವಾಗಲೇ ಹೊಸ ಕಾಯಿಲೆಯ ಭೀತಿ ಆವರಿಸಿದೆ. ಕೇರಳದ ಹಲವು ಭಾಗಗಳಲ್ಲಿ ಟೊಮೇಟೊ ಫ್ಲೂ ಎಂಬ ಹೊಸ ವೈರಸ್ ಪತ್ತೆಯಾಗಿದ್ದು, ಈ ವೈರಸ್ ಪತ್ತೆಯಾದ ಬಳಿಕ ಜ್ವರದಿಂದ ಬಳಲುತ್ತಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸಲು ಅದೇಶಿಸಿದೆ. ರಾಜ್ಯದಲ್ಲಿ ಇದುವರೆಗೆ ಐದು ವರ್ಷದೊಳಗಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಇದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ವೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎನ್ನಲಾಗಿದೆ.

ಟೊಮೆಟೊ ಜ್ವರದ ಮುಖ್ಯ ಲಕ್ಷಣಗಳೆಂದರೆ ಕೆಂಪು ದದ್ದು, ಗುಳ್ಳೆಗಳು, ಚರ್ಮದ ಕಿರಿಕಿರಿ ಮತ್ತು ಡಿ ಹೈಡ್ರೇಶನ್. ಇದಲ್ಲದೆ, ಸೋಂಕಿತ ಮಕ್ಕಳಲ್ಲಿ ತೀವ್ರ ಜ್ವರ, ಮೈ ಕೈ ನೋವು, ಕೀಲು ಊತ, ಸುಸ್ತು, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಅತಿಸಾರ, ಕೆಮ್ಮು, ಸೀನುವಿಕೆ ಮತ್ತು ಸ್ರವಿಸುವ ಮೂಗು, ಮತ್ತು ಕೈಗಳ ಬಣ್ಣ ಬದಲಾವಣೆಯಂತಹ ಲಕ್ಷಣಗಳು ಕಂಡುಬರುತ್ತವೆ.

ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಹರಡುತ್ತಿದೆ. ಈ ಕಾಯಿಲೆ ಕಾಕ್ಸಿಚ್‌ ಮತ್ತು ಶಿಗೆಲ್ಲಾ ವೈರಸ್‌ಗಳ ಮೂಲಕ ಹರಡುತ್ತದೆ. ಇದು ವೇಗವಾಗಿ ಹರಡುತ್ತಿರುವ ಕಾಯಿಲೆಯಾಗಿದೆ. ಇದನ್ನು ವೈದ್ಯಕೀಯವಾಗಿ ಹ್ಯಾಂಡ್‌-ಫೂಟ್‌-ಮೌತ್‌ ಡಿಸೀಸ್‌ ಎಂದು ಕರೆಯುತ್ತಾರೆ. ಈ ಕಾಯಿಲೆ ಹರಡಲು ಮುಖ್ಯ ಕಾರಣವೆಂದರೆ ಶುಚಿತ್ವ ಕಾಯ್ದುಕೊಳ್ಳದೇ ಇರುವುದು. ಮಕ್ಕಳನ್ನು ಎಲ್ಲೆಂದರಲ್ಲಿ ಹೊರಗಿನ ವಾತಾವರಣದಲ್ಲಿ ಆಟವಾಡಲು ಬಿಟ್ಟಾಗ ನಂತರ ಸ್ವಚ್ಛವಾಗಿ ಸ್ನಾನ ಮಾಡಿಸಿ, ಆಹಾರಗಳನ್ನು ನೀಡದೇ ಇದ್ದಾಗ ಇಂತಹ ಕಾಯಿಲೆಗಳು ಬರುತ್ತವೆ ಎಂದು ಡಾ. ಗೌತಮ್‌ ಚೌದರಿ ಹೇಳುತ್ತಾರೆ.

ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಎನ್ನುವುದಿಲ್ಲ. ರೋಗದ ಲಕ್ಷಣಗಳ ಮೇಲೆ ಅಥವಾ ಕಾಯಿಲೆಗೆ ಒಳಗಾದ ಮಗುವಿನ ಅನಾರೋಗ್ಯವನ್ನು ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಈ ಕಾಯಿಲೆಯಲ್ಲಿ ಕಂಡುಬರುವ ನೀರಿನ ಗುಳ್ಳೆಗಳು 6 ರಿಂದ 7 ದಿನಗಳವರೆಗೆ ಇರುತ್ತದೆ. ನಂತರ ಕ್ರಮೇಣ ಕಡಿಮೆಯಾಗುತ್ತದೆ. ಈ ಕಾಯಿಲೆ ಬಂದಾಗ ಮಕ್ಕಳಲ್ಲಿ ಅತಿಯಾದ ಉರಿ, ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆದಷ್ಟು ಮನೆಯಲ್ಲಿಯೇ ಇರಿಸಿಕೊಳ್ಳಿ. ಅದಷ್ಟೇ ಅಲ್ಲದೆ ಆಹಾರ ಸೇವನೆ ವಿಷಯಕ್ಕೆ ಬಂದಾಗ ಮಸಾಲೆ ಪದಾರ್ಥ, ಖಾರ, ಅತಿಯಾದ ಬಿಸಿ ಆಹಾರ ಸೇವನೆ ಬೇಡ, ದೇಹದಲ್ಲಿ ಅದಾಗಲೇ ದದ್ದುಗಳಂತ ಗುಳ್ಳೆಗಳು ಮಕ್ಕಳಲ್ಲಿ ಹಿಂಸೆ ನೀಡುತ್ತಿರುತ್ತವೆ. ಹೀಗಾಗಿ ಆದಷ್ಟು ಉಗುರು ಬೆಚ್ಚಗಿನ ಅಥವಾ ತಣ್ಣನೆಯ ಆಹಾರ ನೀಡಿ. ಜ್ವರದಿಂದ, ನೀರಿನ ಗುಳ್ಳೆಗಳ ಪರಿಣಾಮವಾಗಿ ದೇಹದಲ್ಲಿ ನಿರ್ಜಲೀಕರಣವಾಗುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯಲು ನೀಡಿ ಅಥವಾ ಜ್ಯೂಸ್‌ನಂತಹ ದ್ರವ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಯಾವುದೇ ಕಾರಣಕ್ಕೂ ನೀರಿನ ಗುಳ್ಳೆಗಳನ್ನು ಒಡೆಯಬೇಡಿ. ಇನ್ಫೆಕ್ಷನ್‌ ಆಗುವ ಸಾಧ್ಯತೆ ಇರುತ್ತದೆ. ಆದರೆ ಯಾವುದೇ ರೀತಿಯ ಆತಂಕ ಬೇಡ ಎಂದು ಡಾ. ಗೌತಮ್‌ ಚೌದರಿ ಸಲಹೆ ನೀಡಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss