ಬೆಂಗಳೂರು: ದಿನಾಂಕ 04-07-2022ರಂದು ಅವಧಿ ಮುಕ್ತಾಯಗೊಳ್ಳಲಿದ್ದಂತ ಎರಡು ಶಿಕ್ಷಕರ, ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ದಿನಾಂಕ 13-06-2022ರಂದು ಮತದಾನ ನಡೆಯಲಿದ್ದು, ದಿನಾಂಕ 15-06-2022ರಂದು ಮತಏಣಿಕೆ ನಡೆಸಲಾಗುತ್ತಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಕೆ.ಟಿ ಶ್ರೀಕಂಠೇಗೌಡ, ವಾಯುವ್ಯ ಪದವೀಧರ ಕ್ಷೇತ್ರದ ನಿರಾಣಿ ಹನುಮಂತಪ್ಪ ರುದ್ರಪ್ಪ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಸವರಾಜ ಹೊರಟ್ಟಿ, ವಾಯುವ್ಯ ಶಿಕ್ಷಕರ ಕ್ಷೇತ್ರದ ಅರುಣ್ ಶಹಾಪೂರ್ ಅವರ ಕಾಲಾವಧಿ ಮುಂಬರುವಂತ ದಿನಾಂಕ 04-07-2022ಕ್ಕೆ ಕೊನೆಗೊಳ್ಳುತ್ತಿದೆ.
ಈ ಸ್ಥಾನಗಳಿದೆ ಇದೀಗ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.ಇದೇ 19-05-2022ರಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಚುನಾವಣೆಗೆ ದಿನಾಂಕ 26-05-2022ರಿಂದ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಪರಿಶೀಲನೆ ದಿನಾಂಕ 27-05-2022ರಂದು ನಡೆಯಲಿದೆ. ನಾಮಪತ್ರ ವಾಪಾಸ್ ಪಡೆಯಲು ದಿನಾಂಕ 30-05-2022 ಕೊನೆಯ ದಿನ. ದಿನಾಂಕ 13-06-2022ರಂದು ಮತದಾನ ನಡೆಯಲಿದ್ದು, ದಿನಾಂಕ 15-06-2022ರಂದು ಮತಏಣಿಕೆ ನಡೆಯಲಿದೆ.





