ನವದೆಹಲಿ: ಕತ್ರಾದಿಂದ ಜಮ್ಮುವಿಗೆ ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದಂತ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಸಂಪೂರ್ಣ ಬಸ್ ಗೆ ವ್ಯಾಪಿಸಿದ ಪರಿಣಾಮ, ಇಬ್ಬರು ಯಾತ್ರಾರ್ಥಿಗಳು ಸಜೀವವಾಗಿ ಧಹಿಸಿ ಹೋಗಿದ್ದಾರೆ. ಅಲ್ಲದೇ 22 ಮಂದಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಈ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ಸುದ್ದಿ ಸಂಸ್ಥೆ ಎಎನ್ಐಗೆ ಮಾಹಿತಿ ನೀಡಿದ್ದು, ಜಮ್ಮುವಿಗೆ ಕತ್ರಾದಿಂದ ಹೊರಟಿದ್ದಂತ ಸ್ಥಳೀಯ ಬಸ್ ಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಯಾತ್ರಾರ್ಥಿಗಳು ಮೃತಪಟ್ಟಿದ್ದು, ಇತರ 22 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕತ್ರಾದಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖರ್ಮಲ್ ಬಳಿ ಈ ಘಟನೆ ನಡೆದಿದೆ. ಪ್ರಾಥಮಿಕ ವಿವರಗಳ ಪ್ರಕಾರ, ಬಸ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ಶೀಘ್ರದಲ್ಲೇ ಇಡೀ ಬಸ್ಸನ್ನು ಆವರಿಸಿದೆ ಎಂದು ಎಡಿಜಿಪಿ ಜಮ್ಮು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.




