BREAKING: 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ಮಣಿಸಿದ ಭಾರತ, ಮೊದಲ ಬಾರಿಗೆ ಥಾಮಸ್ ಕಪ್ ಗೆಲುವು

ನವದೆಹಲಿ: ಮೇ 15ರ ಭಾನುವಾರ ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಪ್ರತಿಷ್ಠಿತ ಟೀಮ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಪುರುಷರ ತಂಡ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಮಣಿಸಿ, ಮೊದಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿಯನ್ನು ಗೆದ್ದು, ಭಾರತೀಯ ಬ್ಯಾಡ್ಮಿಂಟನ್ ಗೆ ತಂಡವು ಐತಿಹಾಸಿಕ ದಾಖಲೆಯನ್ನು ಬರೆದಿದೆ.

ಪಂದ್ಯಾವಳಿಯ 73 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಥಾಮಸ್ ಮತ್ತು ಉಬರ್ ಕಪ್ನ ಫೈನಲ್ ತಲುಪಿರಲಿಲ್ಲ. ಆದರೆ ಭಾರತೀಯ ಪುರುಷರು ಆ ಇತಿಹಾಸ ಮುರಿದಿದ್ದಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ಚೀನಾ, ಇಂಡೋನೇಷ್ಯಾ, ಜಪಾನ್, ಡೆನ್ಮಾರ್ಕ್ ಮತ್ತು ಮಲೇಷ್ಯಾ ನಂತರ ಥಾಮಸ್ ಕಪ್ ಪ್ರಶಸ್ತಿಯನ್ನು ಗೆದ್ದ 6 ನೇ ರಾಷ್ಟ್ರವಾಯಿತು.

ಎರಡನೇ ಡಬಲ್ಸ್ ಪಂದ್ಯ ಮತ್ತು ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್, ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ/ ಚಿರಾಗ್ ಶೆಟ್ಟಿ ಮತ್ತು ಕಿಡಂಬಿ ಶ್ರೀಕಾಂತ್ 3-0 ಅಂತರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು.

About The Author