BREAKING NEWS: ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವರ್ಗಾವಣೆ, ನೂತನ ಆಯುಕ್ತರಾಗಿ ಪ್ರತಾಪ್ ರೆಡ್ಡಿ ನೇಮಕ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಂತ ಕಮಲ್ ಪಂತ್ ಅವರು ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಪ್ರತಾಪ್ ರೆಡ್ಡಿ ಅವರನ್ನು ನೇಮಸಿಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಂತ ಕಮಲ್ ಪಂತ್ ವರ್ಗಾವಣೆ ಮಾಡಿ, ಪೊಲೀಸ್ ನೇಮಕಾತಿ ವಿಭಾಗದ ಡಿಪಿಯಾಗಿ ನೇಮಕ ಮಾಡಲಾಗಿದೆ. ಅವರ ಸ್ಥಾನಕ್ಕೆ ಲಾ ಅಂಡ್ ಆರ್ಡರ್ ನ ಹೆಚ್ಚುವರಿ ಡಿಜಿಪಿ ಸಿ ಹೆಚ್ ಪ್ರತಾಪ್ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ.

ಇನ್ನೂ ಕೆ ಎಸ್ ಆರ್ ಪಿಯ ಹೆಚ್ಚುವರಿ ಡಿಜಿಪಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.ಕ್ರೈಂ ಮತ್ತು ಟೆಕ್ನಿಕಲ್ ಸರ್ವಿಸ್ ನ ಎಡಿಜಿಪಿಯಾಗಿದ್ದಂತ ಆರ್ ಹಿತೇಂದ್ರ ಅವರನ್ನು ಕೆ ಎಸ್ ಆರ್ ಪಿಯ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.

ಕ್ರೈಂ ವಿಭಾಗದ ಡಿಸಿಪಿಯಾಗಿದ್ದಂತ ಎಂ ಎನ್ ಅನುಚೇತನ್ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಸಿಐಡಿಯ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ಸ್ಥಾನದಲ್ಲಿದ್ದಂತ ಟಿ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.

About The Author