ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮತ್ತೊಂದು ಸ್ಪೋಟಕ ಮಾಹಿತಿ ಬಯಲಾಗಿದೆ. ನೇಮಕಾತಿ ವಿಭಾಗದ ಹೆಡ್ ಕಾನ್ಸ್ ಟೇಬಲ್ ಮನೆಯ ಮೇಲೆ ದಾಳಿ ಮಾಡಿದಂತ ಸಿಐಡಿ ಅಧಿಕಾರಿಗಳಿಗೆ ಕೋಟಿ ಕೋಟಿ ಹಣ ಸಿಕ್ಕಿದೆ.
ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಆಣತಿಯಂತೆ, ಇದೇ ವಿಭಾಗದಲ್ಲಿದ್ದಂತ ಹೆಡ್ ಕಾನ್ಸ್ ಟೇಬಲ್ ಶ್ರೀಧರ್, ಅಭ್ಯರ್ಥಿಗಳೊಂದಿಗೆ ಡೀಲ್ ಗೆ ಇಳಿದಿದ್ದರು. ಈ ಎಲ್ಲಾ ವಿಷಯ ಕಳೆದ ಶುಕ್ರವಾರದಂದು ಇಬ್ಬರ ಬಂಧನದ ಬಳಿಕ ಬಾಯ್ ಬಿಟ್ಟಿದ್ದರು.
ಈ ಮಾಹಿತಿ ಆಧರಿಸಿ, ಹೆಚ್ ಸಿ ಶ್ರೀಧರ್ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಶ್ರೀಧರ್ ನಿವಾಸದಲ್ಲಿ 1.55 ಕೋಟಿ ಪತ್ತೆಯಾಗಿದೆ. ಈ ಹಣ ಜಪ್ತಿ ಮಾಡಿರುವಂತ ಸಿಐಡಿ ಪೊಲೀಸರು, ಮತ್ತಷ್ಟು ತನಿಖೆ ಮುಂದುವರೆಸಿದ್ದಾರೆ.




