ನವದೆಹಲಿ: ಜ್ಞಾನ್ವಾಪಿ ಮಸೀದಿ ಪ್ರಕರಣವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ ಸುಪ್ರೀಂ ಕೋರ್ಟ್, ವಾರಾಣಸಿ ನ್ಯಾಯಾಲಯವು ಇಂದು ಈ ವಿಷಯವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಕೇಳಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಇಂದು ಯಾವುದೇ ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆಗೆ ವಾರಣಾಸಿಯ ಸಿವಿಲ್ ಕೋರ್ಟ್ ಅನುಮತಿ ನೀಡಿತ್ತು. ಮೇ.17ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆಯೂ ಆದೇಶಿಸಿತ್ತು. ಆದ್ರೇ.. ವರದಿ ಸಲ್ಲಿಸಲು ಎರಡು ದಿನ ಸರ್ವೆ ಅಧಿಕಾರಿಗಳು ಕೋರಿಕೊಂಡ ಕಾರಣ, ಅವಕಾಶ ನೀಡಲಾಗಿತ್ತು. ಅದರಂತೆ ಇಂದು ಜ್ಞಾನವಾಪಿ ಮಸೀದಿಯ ಸರ್ವೆ ವರದಿಯನ್ನು ಕೋರ್ಟ್ ಗೆ ಸರ್ವೆ ಅಧಿಕಾರಿಗಳು ಸಲ್ಲಿಸಿದ್ದರು.
ಇಂದು ವಾರಣಾಸಿಯ ಸಿವಿಲ್ ಕೋರ್ಟ್ ಗೆ ಮೇ.14ರಿಂದ 16ರವರೆಗೆ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆ ಕಾರ್ಯ ನಡೆಸಿದ್ದಂತ ಸುಮಾರು 12 ಪುಟಗಳ ವರದಿಯನ್ನು ಸಲ್ಲಿಸಿದೆ.
ಕೋರ್ಟ್ ಗೆ ಸಲ್ಲಿಸಿರುವಂತ 12 ಪುಟಗಳ ವರದಿಯಲ್ಲಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ. 4 ದೇವರ ವಿಗ್ರಹದ ಮಾದರಿಯೂ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೋರ್ಟ್ ಕಮೀಷನರ್ ವಿಶಾಲ್ ಸಿಂಗ್, ವಾರಣಾಸಿ ಸಿವಿಲ್ ಕೋರ್ಟ್ ಗೆ ಸರ್ವೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ಸಲ್ಲಿಕೆ ನಂತ್ರ ವಿಚಾರಣೆ ಕೈಗೆತ್ತಿಕೊಳ್ಳೋ ಮುನ್ನವೇ ಸುಪ್ರೀಂ ಕೋರ್ಟ್ ಇಂದು ಜ್ಞಾನವಾಪಿ ಮಸೀದಿ ಪ್ರಕರಣ ಸಂಬಂಧ ಯಾವುದೇ ಅರ್ಜಿ ವಿಚಾರಣೆ, ತೀರ್ಪು ನೀಡದಂತೆ ತಡೆ ನೀಡಿದೆ.




