Wednesday, November 19, 2025

Latest Posts

ಪೈಸಾ ವಸೂಲ್ ಸಿನಿಮಾ “ಕಟಿಂಗ್ ಶಾಪ್”..!

- Advertisement -

ವೀಕೆಂಡ್ ಬಂತು ಅಂದ್ರೆ ಸಾಕು, ಅದ್ರಲ್ಲೂ ಸಿನಿ ಫ್ರೈಡೆಯಂತೂ ಸಿನಿಪ್ರಿಯರು ಕಾಯೋದೇ ಸಿನಿಮಾಗಳಿಗಾಗಿ..ಈ ವಾರ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಇಷ್ಟೊಂದು ಸಿನಿಮಾಗಳಲ್ಲಿ ಯಾವ್ ಸಿನಿಮಾ ಈ ವೀಕೆಂಡ್ ನೋಡ್ಬೋದು ಅಂತ ಕೇಳಿದ್ರೆ ನಾವ್ ಹೇಳ್ತೀವಿ “ಕಟಿಂಗ್ ಶಾಪ್” ಸಿನಿಮಾ ನೋಡಿ ಅಂತ.

ನಿರ್ದೇಶಕ ‘ಸಿಂಪಲ್’ ಸುನಿ ಅವರ ಜೊತೆಗೆ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದ ಪವನ್ ಭಟ್ ಈ ‘ಕಟಿಂಗ್ ಶಾಪ್’ ಸಿನಿಮಾದ ಸೂತ್ರಧಾರಿ. ವಿಶೇಷವೆಂದರೆ, ಪವನ್ ಭಟ್ ಅವರ ಸಹೋದರ ಕೆ.ಬಿ. ಪ್ರವೀಣ್ ಚಿತ್ರದ ಪ್ರಮುಖ ಪಾತ್ರಧಾರಿ. ಮತ್ತೊಂದು ವಿಶೇಷವೆಂದರೆ, ಪವನ್ ಭಟ್ ನಿರ್ದೇಶನದ ಜತೆಗೆ ಈ ಸಿನಿಮಾಗೆ ಸಾಹಿತ್ಯ ಹಾಗೂ ಸಂಭಾಷಣೆ ರಚಿಸಿದರೆ, ಪ್ರವೀಣ್ ಬಣ್ಣ ಹಚ್ಚುವುದರ ಜತೆ ಜತೆಗೆ ಸಂಗೀತ ಮತ್ತು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಕಟಿಂಗ್ ಶಾಪ್…ಈ ಸಿನಿಮಾ ಟೈಟಲ್‌ನಲ್ಲೇ ಚಿತ್ರಕಥೆಯ ಒನ್‌ಲೈನ್ ಇದೆ. ನಾರ್ಮಲ್ಲಾಗಿ ಕಟಿಂಗ್ ಶಾಪ್ ಅಂದ್ರೆ ನೀವು ಹೇರ್ ಕಟ್ ಅಥ್ವಾ ಶೇವಿಂಗ್ ಮಾಡ್ಸೋ ಕಟಿಂಗ್ ಶಾಪ್ ಅಂತ ಅಂದ್ಕೊಂಡಿರ್ತೀರಾ ಅಲ್ವಾ..ಆದ್ರೆ ಈ ಕಟಿಂಗ್ ಶಾಪ್ ಅಂದ್ರೆ ಬೇರೇನೇ ಮೀನಿಂಗ್ ಇದೆ. ಎಡಿಟರ್ ಆಗ್ಬೇಕು ಎಂಬ ಕನಸೊತ್ತ ಮಿಡಲ್ ಕ್ಲಾಸ್ ಯುವಕ, ಕಾಲೇಜ್‌ನಲ್ಲಿ ಡಿಬಾರ್ ಮಾಡಿ ಹೊರಗಾಕ್ತಾರೆ. ಇತ್ತ ಮನೇಲೂ ಹೇಳಿದ್ ಮಾತ್ ಕೇಳ್ತಿಲ್ಲ ಅಂತ ಅಣ್ಣ ಹೊರಗಾಗ್ತಾರೆ.

ಏನೇ ಆದ್ರೂ ಜೀವನದಲ್ಲಿ ಕುಗ್ಗದೇ ಛಲ ಬಿಡದೇ ತನ್ನ ಕನಸನ್ನ ನನಸು ಮಾಡುವತ್ತ ಸಾಗಿದ ನಟ ಪ್ರವೀಣ್ ಭಟ ತಾನು ಅಂದುಕೊಂಡಿದ್ದನ್ನ ಸಾಧಿಸ್ತಾನೆ. ಸ್ನೇಹಿತನ ಸಾಥ್ ಜೊತೆಗೆ ಪ್ರೇಯಸಿಯ ಬೆಂಬಲ ಅಮ್ಮನ ನಿಷ್ಕಲ್ಮಷ ಪ್ರೀತಿ ಮಧ್ಯೆ ಅಣ್ಣನ ಮುನಿಸೊಟ್ಟಿಗೆ ಮನಸ್ಸಲ್ಲಿ ಎಂದಿಗೂ ಅಳಿಯದ ಸಹೋದರನ ಪ್ರೀತಿ. ಇವೆಲ್ಲದರ ನಡುವೆ ಮಂಗಳೂರು ಸೊಗಡಿನ ಭಾಷೆ, ಡಬ್ಬಲ್ ಮೀನಿಂಗ್ ಇಲ್ಲದ ಕಾಮೆಡಿ ನಿಮ್ಮನ್ನ ಮನರಂಜಿಸುತ್ತೆ. ಯಾವುದೇ ಮಾಸ್ ಮಸಾಲಾ ಅಂಶಗಳು, ಲಾಂಗು, ಮಚ್ಚು ಇಲ್ಲದೇ ನಾರ್ಮಲ್ ಲವ್ ಸ್ಟೋರಿ, ಅಥ್ವಾ ಅದೇ ಕಮರ್ಷಿಯಲ್ ಸ್ಟೋರಿ ಇಲ್ಲಿ ರಿಪೀಟ್ ಆಗಿಲ್ಲ. ಬದಲಿಗೆ ಹೊಸಬರೇ ಸೇರಿ ಹೊಸದೊಂದು ಕಥೆಯನ್ನ ಸಿನಿಮಾ ರೂಪದಲ್ಲಿ ಬಿಗ್ ಸ್ಕ್ರೀನ್ ಮೇಲೆ ತಂದಿದ್ದಾರೆ.

ಹೀರೋಯಿಸಂ, ಅನಗತ್ಯ ಬಿಲ್ಡಪ್ ಇತ್ಯಾದಿಗಳಿಲ್ಲದ ಒಂದು ಸುಂದರ ಮನರಂಜನಾತ್ಮಕ ಸಿನಿಮಾ ಅಂತ ಹೇಳಬಹುದು. ಒಟ್ಟಿನಲ್ಲಿ ನೀವು ಕೊಟ್ಟ ಕಾಸಿಗೆ ಮೋಸ ಆಗೊಲ್ಲ ಎಂಬ ಭರವಸೆಯನ್ನಂತೂ ಚಿತ್ರತಂಡ ಸಿನಿಮಾ ಮೂಲಕ ನಿರೂಪಿಸಿದೆ.

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss