BREAKING NEWS: ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಪಟ್ಟಿ ಪ್ರಕಟ: ನಾಲ್ವರಿಗೆ ಟಿಕೆಟ್, ವಿಜಯೇಂದ್ರಗೆ ಶಾಕ್

ಬೆಂಗಳೂರು: ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಅಚ್ಚರಿಯ ಹೆಸರನ್ನು ಪ್ರಕಟಿಸಲಾಗಿದೆ. ಮುಂಚೂಣಿಯಲ್ಲಿದ್ದಂತ ಹೆಸರುಗಳ ಹೊರತಾಗಿ, ಕೊನೆಯ ಕ್ಷಣದಲ್ಲಿ ಎಸ್ ಕೇಶವ ಪ್ರಸಾದ್, ಲಕ್ಷ್ಮಣ್ ಸವದಿ, ಹೇಮಲತಾ ನಾಯಕ್ ಮತ್ತು ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಮೂಲಕ ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅದೃಷ್ಟ ಖುಲಾಯಿಸಿದೆ.

ಪರಿಷತ್ ಚುನಾವಣೆಗೆ ಇಂದು ಮಧ್ಯಾಹ್ನ 3 ಗಂಟೆ ನಾಮಪತ್ರ ಸಲ್ಲಿಸಲು ಡೆಡ್ ಲೈನ್ ಆಗಿತ್ತು. ಕೊನೆಯ ಕ್ಷಣದವರೆಗೆ ಅಭ್ಯರ್ಥಿಗಳ ಹೆಸರು ಘೋಷಣೆಯನ್ನು ಸಸ್ಪೆನ್ಸ್ ಆಗೇ ಇಟ್ಟಿದ್ದಂತ ಬಿಜೆಪಿ ಹೈಕಮಾಂಡ್ ಇದೀಗ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.

ಮಾಜಿ ಸಚಿವ ಲಕ್ಷ್ಮಣ್ ಸವದಿ, ಹೇಮಲತಾ ನಾಯಕ್, ಎಸ್ ಕೇಶವ ಪ್ರಸಾದ್ ಹಾಗೂ ಛಲವಾದಿ ನಾರಾಯಣಸ್ವಾಮಿಗೆ ಬಿಜೆಪಿಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಂತ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಕ್ಕೆ ಟಿಕೆಟ್ ನೀಡದೇ ಬಿಗ್ ಶಾಕ್ ನೀಡಿದೆ.

ಅಂದಹಾಗೇ, ಜೂನ್ 3ರಂದು ನಡೆಯಲಿರುವಂತ ವಿಧಾನ ಪರಿಷತ್ ಚುನಾವಣೆಗೆ ಇಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೆಯ ಕ್ಷಣವಾಗಿತ್ತು. ಈ ವೇಳೆಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.

About The Author