ಶೀಘ್ರದಲ್ಲೇ ನಟ “ಸುನಿಲ್ ರಾವ್” ಸಿನಿಜರ್ನಿಯ ಕಂಪ್ಲೀಟ್ ಸಂದರ್ಶನ..!
ಕನ್ನಡ ಚಿತ್ರರಂಗದ ಅದ್ಭುತ ನಟ ಸುನಿಲ್ ರಾವ್ ಎಲ್ಲೋಗ್ಬಿಟ್ರಪ್ಪಾ ಅಂತ ಎಲ್ರೂ ಅಂದ್ಕೊಳ್ತಿರುವಾಗ 2017 ರಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್ ಸೀರಿಸ್ ಲೂಸ್ ಕನೆಕ್ಷನ್ ಮೂಲಕ ಮತ್ತೆ ಚಿತ್ರರಂಗಕ್ಕೆ ಕನೆಕ್ಷನ್ ಆದರು. 2010 ರಲ್ಲಿ ತೆರೆಕಂಡಿದ್ದ “ಪ್ರೇಮಿಸಂ” ಸಿನಿಮಾ ಬಳಿಕ ಈಗ ಬರೋಬ್ಬರಿ 8 ವರ್ಷಗಳ ಲಾಂಗ್ ಬ್ರೇಕ್ ತೆಗೆದುಕೊಂಡು ತುರ್ತು ನಿರ್ಗಮನದ ಮೂಲಕ ತ್ವರಿತ ಪುನರ್ ಆಗಮನ ಆಗಲು ಸಜ್ಜಾಗಿದ್ದಾರೆ ನಟ ಸುನಿಲ್.
ಅಷ್ಟಕ್ಕೂ ನಟ ಸುನಿಲ್ ಯಾಕೆ ಇಷ್ಟೊಂದು ಲಾಂಗ್ ಬ್ರೇಕ್ ತಗೊಂಡ್ರು, ಈ ಗ್ಯಾಪ್‌ನಲ್ಲಿ ಅವ್ರು ಏನ್ ಮಾಡ್ತಿದ್ರು ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಬಂದೇ ಬರುತ್ತೆ. ಕರ್ನಾಟಕ ಟಿವಿಯಲ್ಲಿ ತಮ್ಮ ಸಿನಿಯಾನದ ಬಗ್ಗೆ ಕಂಪ್ಲೀಟ್ ಸಂದರ್ಶನ ನೀಡಿರುವ ನಟ ಸುನಿಲ್ ರಾವ್ ತಾವು ಅಷ್ಟು ವರ್ಷಗಳ ಕಾಲ ಯಾಕೆ ಕನ್ನಡ ಚಿತ್ರರಂಗದಿಂದ ದೂರ ಇದ್ದರು ಅನ್ನೋದ್ರ ಬಗ್ಗೆ ಕಾರಣ ತಿಳಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ಸುನಿಲ್ ಅವರ ಮೊದಲನೇ ಸಿನಿಮಾ “ಎಕ್ಸ್ ಕ್ಯೂಸ್ ಮಿ” ಅಂತಲೇ ಅಂದ್ಕೊಂಡಿದ್ದಾರೆ. ಆದರೇ ಇದಕ್ಕೂ ಮುನ್ನ ನಟ ಸುನಿಲ್, ಸೀರಿಯಲ್ ಸೀರೀಸ್‌ಗಳಲ್ಲಿ, ಬಾಲನಟನಾಗಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದರು, ಬಳಿಕ “ವಂದೇ ಮಾತರಂ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಬಳಿಕ ಲೀಡ್ ರೋಲ್ ನಲ್ಲಿ ನಟಿಸಿದ ಮೊದಲನೇ ಸಿನಿಮಾ “ಪ್ರೀತಿ ಪ್ರೇಮ ಪ್ರಣಯ”, ನನ್ನ ಸಿನಿಜರ್ನಿಗೆ ಯೂಟರ್ನ್ ಕೊಟ್ಟ ಸಿನಿಮಾ “ಎಕ್ಸ್ ಕ್ಯೂಸ್ ಮಿ” ಅಂತ ತಿಳಿಸಿದ್ದಾರೆ.
ಪ್ರೇಮ್ ಡೈರೆಕ್ಷನ್ ಹೇಳಿದ್ದ “ಎಕ್ಸ್ ಕ್ಯೂಸ್ ಮಿ” ಸಿನಿಮಾ ಆಗಲೇ ಹೊಸ ಇತಿಹಾಸ ಸೃಷ್ಟಿಸಿತ್ತು. ಅಜೆಯ್ ರಾವ್, ನಟಿ ರಮ್ಯಾ ಜೊತೆಯಲ್ಲಿ ನಟಿಸಿದ್ದ ಸುನಿಲ್ ಗೂ ಒಳ್ಳೆ ಕಿಕ್ ಸ್ಟಾರ್ಟ್ ಕೊಟ್ಟಿತ್ತು. ಇದೀಗ ನಟಿ ರಮ್ಯಾ ಸ್ಯಾಂಡಲ್‌ವುಡ್‌ನತ್ತ ಮತ್ತೆ ಮುಖ ಮಾಡಲು ಮನಸ್ಸು ಮಾಡ್ತಿದ್ದು, ಒಳ್ಳೆ ಕಥೆ ಮೂಡಿಬಂದ್ರೆ ಮತ್ತೆ ನಮ್ಮಿಬ್ಬರ ಕಾಂಬೋ ಸಿನಿಮಾ ಬರಲಿದೆ ಎಂದು ಮಾತನಾಡಿದ್ದಾರೆ. ಇನ್ನು ಸುನಿಲ್ ರಾವ್ ಮಗುವಿದ್ದಾಗಿಂದಲೂ ಡಾ.ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಶ್, ಅನಂತ್ ನಾಗ್ ರಂತಹ ಸಾಧಕರ ನಡುವೆ ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಹೆತ್ತ ತಾಯಿಯೇ ಕನ್ನಡದ ಹೆಮ್ಮೆಯ ಖ್ಯಾತ ಗಾಯಕಿ, ಹೀಗಿರುವಾಗ ಆ ಒಳ್ಳೆಯ ಸಂಸ್ಕಾರ ಪೋಷಣೆಗಳೇ ನಟ ಸುನಿಲ್ ರಾವ್‌ಗೆ ಈಗ ದೊಡ್ಡ ಆಸ್ತಿ ಅಂತೆ. ಹೀಗೆ ಇನ್ನೂ ಸಾಕಷ್ಟು ರೋಚಕ ವಿಷಯಗಳನ್ನ ನಟ ಸುನಿಲ್ ರಾವ್ ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ
ನಳಿನಾಕ್ಷಿ, ಕರ್ನಾಟಕ ನ್ಯೂಸ್