Tuesday, December 24, 2024

Latest Posts

ಭರ್ಜರಿ ಆಕ್ಷನ್ ಸೀನ್ಸ್ ನಲ್ಲಿ ನಟ ಪ್ರಮೋದ್.!

- Advertisement -

ಪ್ರಮೋದ್‌ ಕಿರುತೆರೆಯಿಂದ ಹಿರಿತೆರೆಗೆ ಬಂದ ನಟ. ತಮ್ಮ ಮೊದಲ ಸಿನಿಮಾ ‘ಗೀತಾ ಬ್ಯಾಂಗಲ್‌ ಸ್ಟೋರ್’ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದರಾದರೂ, ಹೆಚ್ಚು ಹೆಸರು ಮಾಡಿದ್ದು ಮಾತ್ರ ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದ ನಂಜುಂಡಿ ಪಾತ್ರದ ಮೂಲಕ. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚಿಗಷ್ಟೇ ಓಟಿಟಿಯಲ್ಲಿ ರಿಲೀಸ್ ಆಗಿ ಮನೆ ಮಾತಾದ ‘ರತ್ನನ್‌ ಪ್ರಪಂಚ’ ಸಿನಿಮಾದಲ್ಲಿಯೂ ಕೂಡ ಪ್ರಮೋದ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇವರ ನಟನೆ ಕಂಡು ಸಾಕಷ್ಟು ಸಿನಿಮಾಗಳು ಇವರ ಬಳಿ ಬರ್ತಿದೆ. ಆದರೆ ಇವರು ಹೀರೋ ಆಗಿ ;ಬಾಂಡ್ ರವಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪ್ರಮೋದ್ ನಟನೆಯ ‘ಬಾಂಡ್ ರವಿ’ ಸಿನಿಮಾದ ಚಿತ್ರೀಕರಣ ಬಹಳ ವೇಗದಲ್ಲಿ ಸಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಎಚ್ಎಂಟಿ ಫ್ಯಾಕ್ಟರಿಯಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಯಿತು. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈಚೆಗಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿತ್ತು. ಇನ್ನು ಈ ಸಿನಿಮಾದ ಶೂಟಿಂಗ್ ಶೇ.70ರಷ್ಟು ಕಂಪ್ಲೀಟ್ ಆಗಿದ್ದು, ಖ್ಯಾತ ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದೆ.

ಪ್ರಮೋದ್, ಸಹಕಲಾವಿದರು ಭರ್ಜರಿ ಆಕ್ಷನ್ ಸೀನ್ಸ್ ಭಾಗಿಯಾಗಿದ್ದು, ಕಳೆದ‌ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪ್ರಮೋದ್‌ಗೆ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸುತ್ತಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss