Monday, December 23, 2024

Latest Posts

ನಿರ್ದೇಶಕ ಗೀತಕೃಷ್ಣ ವಿವಾದಾತ್ಮಕ ಹೇಳಿಕೆಗೆ ಶಿವಣ್ಣ ಖಡಕ್ ಪ್ರತಿಕ್ರಿಯೆ.!

- Advertisement -

ತೆಲುಗು ನಿರ್ದೇಶಕ ಗೀತಕೃಷ್ಣ ‘ಸ್ಯಾಂಡಲ್‌ವುಡ್ ಇಂಡಸ್ಟ್ರೀ ಡರ್ಟಿ’ ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಶಿರಸಿಯಲ್ಲಿ ಈ ಹೇಳಿಕೆ ಕುರಿತಾಗಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘’ಯಾರೋ ಏನೋ ಹೇಳಿದರೂ ಎಂದು ಕೇಳುವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಎಂದು ಜಗತ್ತಲ್ಲಿ ಪ್ರೂವ್ ಆಗಿದೆ’’ ಎಂದು ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ.

‘ಕೆಜಿಎಫ್-2’ ಸಿನಿಮಾದಿಂದ ಕನ್ನಡ ಇಂಡಸ್ಟ್ರಿ ಏನು ಎಂಬುದು ಪ್ರೂವ್ ಆಗಿದೆ. ಯಾರೋ ಏನೋ ಹೇಳ್ತಾರೆ ಅಂತ ತಲೆಗ್ ಹಾಕೊಬಾರದು. ಅವರು ಹೇಳಿದ್ದನ್ನ ಒಂದು ಕಿವಿಯಲ್ಲಿ ಕೇಳಬೇಕು, ಮತ್ತೊಂದು ಕಿವಿಯಲ್ಲಿ ಬಿಟ್ಟುಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತದೆ. ಅಂಥವರ ಬಗ್ಗೆ ರಿಯಾಕ್ಟ್ ಮಾಡಿದಷ್ಟು ಅವರಿಗೆ ಬೆನಿಫಿಟ್ ಜಾಸ್ತಿ ಆಗುತ್ತದೆ. ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಅಂತ ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲಾ ಕಲಾವಿದರೂ ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂಥವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರೋ ಎಂದು ನೆಗ್ಲೆಟ್ ಮಾಡಬೇಕು’’ ಎಂದು ಶಿವಣ್ಣ ಹೇಳಿದ್ದಾರೆ.

ನಂತರ ಅವರ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ ಶಿವಣ್ಣ, ‘’ನನ್ನ ನೆಕ್ಸ್ಟ್ ಸಿನಿಮಾ ಬೈರಾಗಿ. ಇದು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಇದು ಭಾವನೆಗಳ ಕಥೆ, ಪ್ರತಿಯೊಂದು ಪಾತ್ರಕ್ಕೂ ಕೂಡ ಒಂದೊಂದು ಅರ್ಥ ಇದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ’’ ಎಂದು ಹೇಳಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss