- Advertisement -
ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಗಡಿಪಾರು ಮಾಡುವುದಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಿಗ್ಗೆ 11 ಗಂಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಬಾಗ ಜಿಲ್ಲಾಧ್ಯಕ್ಷ ಶ್ರೀ ಎ ಎಲ್ ಕೆಂಪುಗೌಡರವರ ನೇತೃತ್ವದಲ್ಲಿ ಡೋಂಗಿ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ರವರು ಪ್ರತಿಭಟನೆ ನಡೆಸಿದರು.
ಕೃಷಿಕಾರ್ಮಿಕರ ಹೆಸರಿನಲ್ಲಿ ಮಾಡಿರುವಂತಹ ಮೋಸ, ವಂಚನೆ ಹಾಗೂ ಅಕ್ರಮವಾಗಿ ಗಳಿಸಿರುವ ಆಸ್ತಿ, ಹಣವನ್ನು ತನಿಖೆ ನಡೆಸಿ ಕೂಡಲೇ ಅವರನ್ನು ಬಂಧಿಸಬೇಕೆಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರೈತ ಶಾಲು ಹಾಕಿಕೊಂಡು ಅಕ್ರಮ ಮಾಡ್ತಿದ್ದು, ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನ ಮುಟ್ಟುಗೋಲು ಹಾಕುವಂತೆ ಡಿಸಿ ಮೂಲಕ ರೈತ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ತಕ್ಷಣವೇ ಬಂಧಿಸುವಂತೆ ಘೋಷಣೆ ಕೂಗಿ ಆಕ್ರೋಶವನ್ನು ಹೊರ ಹಾಕಿದರು.
- Advertisement -