ಸತತವಾಗಿ ಒಂದು ವಾರ ಮಳೆರಾಯನ ಆರ್ಭಟಕ್ಕೆ ರೈತ ನಲುಗಿದ್ದಾನೆ. ರಾಶಿ ಹಾಕಿದ ಭತ್ತವನ್ನು ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಒಳ್ಳೆಯ ಲಾಭ ತೆಗೆದು ಸ್ವಲ್ಪ ಸಾಲ ತೀರಿಸಬೇಕು ಎನ್ನುವಷ್ಟರಲ್ಲಿ ಭತ್ತ ಸಂಪೂರ್ಣ ನೀರು ಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ಈ ರೈತನ ಪಾಡು.
ಮಳೆ ರಾಯನ ಅರ್ಭಟಕ್ಕೆ ರಾಶಿ ರಾಶಿ ಬಿದ್ದಿರುವ ಭತ್ತದ ಬೆಳೆ ಮೊಳಕೆ ಬಂದಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ನೀರಿನಲ್ಲಿ ನೆನೆದಿರುವ ಭತ್ತದ ಬೆಳೆಯನ್ನು ರೈತರು ಬೆರೆ ಕಡೆ ಸಾಗಿಸುತ್ತಿದ್ದಾರೆ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯಲ್ಲಿ, ಕೊರಿವಿಹಾಳ, ಕೊರ್ತಕುಂದ, ಡಿ ರಾಂಪೂರ, ಸಂಗಮ ಕುಂಟ. ಈ ಗ್ರಾಮಗಳಲ್ಲಿ ಒಟ್ಟು ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದ್ದು, ರೈತರು ಕಂಗಾಲಗಿದ್ದಾರೆ.
ನಾಗಲಿಂಗೇಶ್ವರ ಎಂಬ ರೈತ ಒಂದು ಹೆಕ್ಟೇರ್ ಜಮೀನಿಗೆ 20 ರಿಂದ 25 ಸಾವಿರ ರೂ ಖರ್ಚು ಮಾಡಿದ್ದಾನೆ. ಒಟ್ಟು 25 ಹೆಕ್ಟೇರ್ ಗೆ 4 ರಿಂದ 5 ಲಕ್ಷ ರೂ ಖರ್ಚು ಮಾಡಿ ಭತ್ತ ಬೆಳೆದಿದ್ದರು.
ಇನ್ನೂ ಈ ಬಾರಿ ರೈತ ಭತ್ತ ನಾಟಿ ಮಾಡಿರುವುದು ಸಾರಿಯಾದ ರೀತಿಯಲ್ಲಿ ಫಸಲು ಬಂದಿಲ್ಲ. ಹಾಗಾಗಿ ಬಂದಂತಹ ಬೆಳೆಗೆ ಸರಿಯಾದ ರೀತಿ ಬೆಲೆ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಭತ್ತ ಕಟಾವು ಮಾಡಿ ಭತ್ತವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೊಗುವಸಟ್ಟರಲ್ಲಿ, ಮಳೆಯಿಂದಾಗಿ ಭತ್ತ ಸಂಪೂರ್ಣ ನೀರು ಪಾಲಾಗಿದೆ. ಇನ್ನೂ ಹೆಕ್ಟೇರ್ ಗೆ 20 ಸಾವಿರ ಖರ್ಚು ಮಾಡಿದ ನಾಗಲಿಂಗೇಶ್ವರ ರೈತ ಮಾತ್ರ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ಕೊರವಿಹಾಳ ಹಾಗೂ ಕೊರ್ತಕುಂದ ಗ್ರಾಮಗಳ ಒಟ್ಟು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಕಣ್ಣಿರಿನಲ್ಲಿ ಕೈತೋಳೆಯುವಂತಾಗಿದೆ. ಇನ್ನೂ ರಾಯಚೂರು ತಾಲ್ಲೂಕಿನ ಬಹಳಷ್ಟು ಕಡೆ ಬೆಳೆ ಹಾನಿಯಾಗಿದ್ದು, ಇಲ್ಲಿಯ ವರೆಗೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಆ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಅಲ್ಲಿನ ಸ್ಥಳೀಯ ರೈತರು ಆರೋಪ ಮಾಡಿದ್ದಾರೆ.
ಅನಿಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು