ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಇಂದು ಮಾನಸ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೂಸ್ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಶುಭದೀಪ್ ಸಿಂಗ್ ಸಿಧು ಅವರ ರಂಗನಾಮ ಸಿಧು ಮೂಸ್ ವಾಲಾ ಅವರಿಂದ ಜನಪ್ರಿಯರಾಗಿದ್ದರು. ಶ್ರೀ ಮೂಸ್ ವಾಲಾ ಮತ್ತು ಅವರ ಇಬ್ಬರು ಸ್ನೇಹಿತರು ಪಂಜಾಬಿನ ತಮ್ಮ ಗ್ರಾಮವಾದ ಮಾನಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಸ್ಥಳದಲ್ಲಿಯೇ ಗಾಯಕ ಸಿಧು ಮೂಸ್ ವಾಲಾ ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
Punjab | Congress leader and Punjabi singer Sidhu Moose Wala was shot by unknown people in Mansa district, three people including Sidhu injured in the firing incident. Further details awaited.
— ANI (@ANI) May 29, 2022
2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಸಿಧು ಮೂಸ್ ವಾಲಾ ಅವರು ಮಾನಸಾದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. ಅವರನ್ನು ಆಮ್ ಆದ್ಮಿ ಪಕ್ಷದ ಡಾ.ವಿಜಯ್ ಸಿಂಗ್ಲಾ ಅವರು ಸೋಲಿಸಿದರು.




