ಬೆಂಗಳೂರು: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಿಂದ ಇಬ್ಬರು ಹುರಿಯಾಳುಗಳನ್ನು ಘೋಷಣೆ ಮಾಡಲಾಗಿದೆ. ನಟ ಜಗ್ಗೇಶ್ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಹೆಸರು ಘೋಷಿಸಿದ್ದು, ಜೂನ್ 3ರಂದು ನಡೆಯಲಿರುವಂತ ರಾಜ್ಯಸಭಾ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ನಟ ಜಗ್ಗೇಶ್ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಅಂದಹಾಗೇ ನಟ ಜಗ್ಗೇಶ್ ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದವರಾಗಿದ್ದಾರೆ. ಬಿಜೆಪಿ ಸೇರಿದ ಬಳಿಕ ಜಗ್ಗೇಶ್ ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ಬಳಿಕ ಈಗ ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಬಿಜೆಪಿಯಿಂದ ರಾಜ್ಯಸಭಾ ಚುನಾವಣೆಗೆ ವಲಸಿಗರಿಗೆ ಮಣೆ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮತ್ತೊಂದೆಡೆ ರಾಜ್ಯದಿಂದ ಈಗಾಗಲೇ ರಾಜ್ಯಸಭಾ ಚುನಾವಣೆಗೆ ಆಯ್ಕೆಯಾಗಿ, ಕೇಂದ್ರ ಸಚಿವೆಯಾಗಿರುವಂತ ನಿರ್ಮಲಾ ಸೀತಾರಾಮನ್ ಗೆ, ಮತ್ತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗೋದಕ್ಕಾಗಿ ಟಿಕೆಟ್ ನೀಡಲಾಗಿದೆ. ಹೀಗಾಗಿ ಮತ್ತೊಮ್ಮೆ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗೋದು ಖಚಿತವಾಗಿದೆ.





