Wednesday, October 22, 2025

Latest Posts

ಬೇಸಿಗೆಯಲ್ಲಿ ಮಾವಿನಕಾಯಿ ಸೇವಿಸುವುದು ಎಷ್ಟು ಉಪಯೋಗಕಾರಿ ಗೊತ್ತಾ?

- Advertisement -

ಯುಗಾದಿ ಕಳೆದ ನಂತರ ಮಾವಿನ ಹಣ್ಣಿನ ಸೀಸನ್ ಶುರುವಾಗುತ್ತದೆ. ಎಲ್ಲೇ ನೋಡಿದರು ಹಣ್ಣು-ಹಣಾದ ಮಾವಿನ ಹಣ್ಣುಗಳು ಕಾಣ ಸಿಗುತ್ತದೆ. ಆರೋಗ್ಯದ ವಿಷಯಕ್ಕೆ ಬಂದರೆ ಮಾವಿನ ಕಾಯಿ ಮತ್ತು ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಗಳನ್ನು ಹೊಂದಿದೆ. ಮಾವಿನ ಕಾಯಿ ಆಗಿದ್ದಾಗ ನೀಡುವ ಆರೋಗ್ಯ ಪ್ರಯೋಜನಗಳು ಒಂದು ಕಡೆಯಾದರೆ ಹಣ್ಣಾದ ಬಳಿಕ ದುಪ್ಪಟ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ.

ಮಾವಿನಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು. ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ನೀವು ತೂಕ ಇಳಿಸಿಕೊಳ್ಳಲು ಮಾವಿನಕಾಯಿ ತಿನ್ನುವುದು ಉತ್ತಮ ಯಾಕಂದರೆ ಮಾವಿನ ಕೈಯಲ್ಲಿ ಕ್ಯಾಲೋರಿ ಪ್ರೊಫೈಲ್ ಇದ್ದು, ನಿಮ್ಮಲ್ಲಿ ಯಾವುದೇ ಕ್ಯಾಲೊರಿಗಳನ್ನು ಹೆಚ್ಚಿಸುವುದಿಲ್ಲ. ಕಡಿಮೆ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಫೈಬರ್ ಮಾವಿನಕಾಯಿಯನ್ನು ಬೇಸಿಗೆಯ ಉತ್ತಮ ಆಹಾರವನ್ನಾಗಿ ಮಾಡುತ್ತದೆ. ಹಾಗಂತ ಮಾವಿನಕಾಯಿಯನ್ನು ಹೆಚ್ಚಾಗಿ ಸೇವಿಸಿದರೆ ಹೊಟ್ಟೆ ನೋವು ಮತ್ತು ಜೀರ್ಣಕಾರಿ ತೊಂದರೆಗಳು ಕಾಣಿಸಿಕೊಳ್ಳಬಹುದು.

ಮಾವಿನಹಣ್ಣುಗಳು ಬಿಸಿ ಗುಣಗಳನ್ನು ಹೊಂದಿದ್ದರೆ, ಮಾವಿನಕಾಯಿ ತಣ್ಣನೆಯ ಗುಣವನ್ನು ಹೊಂದಿದೆ. ಆದ್ದರಿಂದ, ಮಾವಿನಕಾಯಿಯನ್ನು ಸೇವಿಸುವುದರಿಂದ ದೇಹವು ಶಾಖದ ಪರಿಣಾಮವನ್ನು ಕಡಿಮೆ ಮಾಡಿ ತಂಪಾಗಲು ಸಹಾಯ ಮಾಡುತ್ತದೆ.

ಮಾವಿನ ಕಾಯಿಯನ್ನು ಸೇವಿಸುವುದರಿಂದ ಬೆವರುವುದು ಕಮ್ಮಿಯಾಗುತ್ತದೆ. ಏಕೆಂದರೆ ಇದು ರಂಧ್ರಗಳಿಂದ ನೀರಿನ ಬಿಡುಗಡೆಯನ್ನು ನಿಯಂತ್ರಿಸುತ್ತದೆ ಮತ್ತು ಬೆವರುವಿಕೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಮಾವಿನಕಾಯಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಒದಗಿಸುತ್ತದೆ. ಹಾಗೂ ಬೇಸಿಗೆಯಲ್ಲಿ ಶಾಖದ ದಾಳಿಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹಾಗಾಗಿ ನೀವು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವುದು ಉತ್ತಮ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss