ಬೆಂಗಳೂರು: ಅಚ್ಚರಿಯ ಬೆಳವಣಿಗೆ ಎನ್ನುವಂತೆ ರಾಜ್ಯಸಭೆ ಚುನಾವಣೆಗೆ ಇಂದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಿಂದ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಜೈರಾಂ ರಮೇಶ್ ಬಳಿಕ ಮನ್ಸೂರ್ ಆಲಿ ಖಾನ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದಲೂ ನಟ ಜಗ್ಗೇಶ್, ನಿರ್ಮಲಾ ಸೀತಾರಾಮನ್ ಬಳಿಕ ಮೂರನೇ ಅಭ್ಯರ್ಥಿಯಾಗಿ ಲೇಹರ್ ಸಿಂಗ್ ಕಣಕ್ಕೆ ಇಳಿದಿದ್ದಾರೆ.
ಇನ್ನೂ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದ್ರೇ.. ಒಂದೂ ಸ್ಥಾನ ಗೆಲ್ಲಲು ಅಸಾಧ್ಯವಾದರೂ 32 ಮತಗಳನ್ನ ಜೆಡಿಎಸ್ ಹೊಂದಿದೆ. ಬಿಜೆಪಿ ಸುಲಭವಾಗಿ ಇಬ್ಬರು ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡರೂ ಮತ್ತೊಂದು ಸ್ಥಾನಕ್ಕೆ 30 ಮತಗಳ ಕೊರತೆಯಿದೆ. ಇನ್ನು ಕಾಂಗ್ರೆಸ್ ಒಂದು ಸ್ಥಾನ ಗೆದ್ದರೂ ಮತ್ತೊಂದು ಸ್ಥಾನ ಗೆಲ್ಲಲು 25 ಮತಗಳ ಕೊರತೆಯಿದೆ. ಈಗ ಯಾವ ಪಕ್ಷದ ಜೊತೆ ಯಾರು ಕೈಜೋಡಿಸ್ತಾರೋ ಅವರೇ ಮುಂದಿನ ಚುನಾವಣೆಗೂ ದೋಸ್ತಿ ಸಾಧ್ಯತೆ ಎಂಬ ಚರ್ಚೆ ನಡೆಯುತ್ತಿದೆ.




