Thursday, October 30, 2025

Latest Posts

ಮಸಿ ಬಳಿದ ಕಿಡಿಗೇಡಿಗಳನ್ನು ಗಡಿಪಾರು ಮಾಡಿ ಪ್ರತಿಭಟನೆಯಲ್ಲಿ ಒತ್ತಾಯ..!

- Advertisement -

ರಾಷ್ಟ್ರ ಮಟ್ಟದ ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆ ಹಾಗೂ ಮಸಿ ಎರಚಿದ ಘಟನೆ ಖಂಡಿಸಿ ಕರವೇ ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ತಾಲೂಕು ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರಕಾರ ಹಾಗೂ ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿದರು . ಕರವೇ ರಾಜ್ಯ ಪ್ರ . ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ , ಟಿಕಾಯತ್ ಮೇಲೆ ನಡೆದ ಹಲ್ಲೆ ಅಕ್ಷಮ್ಯ, ರಾಷ್ಟ್ರಮಟ್ಟದ ನಾಯಕ ರಾಜ್ಯಕ್ಕೆ ಭೇಟಿ ನೀಡಿದರೂ ಸೂಕ್ತ ರಕ್ಷಣೆ ಒದಗಿಸುವಲ್ಲಿ ಸರಕಾರ ಹಾಗೂ ಗುಪ್ತಚರ ಇಲಾಖೆ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆಕೋರರು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು . ಅವರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ, ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್, ಜಿಲ್ಲಾಧ್ಯಕ್ಷ ರಮೇಶ್ ವಿರಾಜ್ , ಗೌರವಾಧ್ಯಕ್ಷ ಪು.ಮಹೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ಎಎಲ್‌ಎನ್ ವೇಣು , ನಗರಾಧ್ಯಕ್ಷ ಬಶೀರ್ , ತಾ.ಉಪಾಧ್ಯಕ್ಷ ಹಾಗೂ ಕಾನೂನು ಸಲಹೆಗಾರ ಆನಂದ್ , ತಾಲೂಕು ಕಾರ್ಯದರ್ಶಿ ಕಾರಹಳ್ಳಿ ಮಂಜು , ಕೋಡಿಹಳ್ಳಿ ಬಾಬು , ರವಿ , ಸೂರಿ , ತಿಮ್ಮರಾಜು ಇತರರು ಇದ್ದರು .

ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ

 

- Advertisement -

Latest Posts

Don't Miss