ಶಾಸಕರಿಗೆ ಸವಾಲು, ರಸ್ತೆಯ ದುರಸ್ಥಿಗೆ ಗ್ರಾಮಸ್ಥರು ಆಗ್ರಹ..!

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ
ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ,
ಮಣಬೂರು ಗ್ರಾಮಸ್ಥರು ಮಣಬೂರು ರಸ್ತೆ ಕಳೆದ 15
ವರ್ಷಗ ಕಳೆದರು ರಸ್ತೆಯ ಅಭಿವೃದ್ಧಿ ಕಂಡಿಲ್ಲ ಎಂದು ಗ್ರಾಮಸ್ಥರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಎನ್.ಜೀವರಾಜ್ ಮೂರು ಬಾರಿ ಶಾಸಕರಾಗಿ
ಆಯ್ಕೆಯಾಗಿದ್ದರೂ ಕೂಡ ಈ ರಸ್ತೆ ದುರಸ್ಥಿಯ ಬಗ್ಗೆ ಗಮನ ಹರಿಸದೇ
ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಗುಡುಗಿದ್ದಾರೆ.

ಬಳಿಕ ಶಾಸಕ ಟಿ.ಡಿ.ರಾಜೇಗೌಡ
ರವರನ್ನು ಕೇಳಿದರೆ ಬಿಜೆಪಿಯವರು ಅನುದಾನವನ್ನು ತಡೆ
ಹಿಡಿದಿದ್ದಾರೆ ಎಂದು ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ.
ಸಾರ್ವಜನಿಕರ ಸೇವೆಗೆ ಆಯ್ಕೆಯಾದ ಜನ ಪ್ರತಿನಿಗಳು ತಮ್ಮರಾಜಕೀಯ
ಬೇಳೆಯನ್ನಷ್ಟೇ ಬೇಯಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದ್ದು,

ಬೇಸತ್ತ ಗ್ರಾಮಸ್ಥರು ಜಿಲ್ಲಾಕಾರಿಗಳ ಕಛೇರಿವರೆಗೆ ಪಾದ
ಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು
ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 

 

 

About The Author